Select Your Language

Notifications

webdunia
webdunia
webdunia
webdunia

ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದ ತಮಿಳು ನಟ ಅಭಿನಯ್ ಕಿಂಗರ್ ಇನ್ನಿಲ್ಲ

Abhinay Kinger

Sampriya

ತಮಿಳುನಾಡು , ಸೋಮವಾರ, 10 ನವೆಂಬರ್ 2025 (17:41 IST)
Photo Credit X
ತಮಿಳುನಾಡು: ಯಕೃತ್ತಿನ ಸಂಬಂಧಿತ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದ ತುಳ್ಳುವದೋ ಇಳಮೈ ಖ್ಯಾತಿಯ ನಟ ಅಭಿನಯ್ ಕಿಂಗರ್ ಅವರು ಇಂದು ನಿಧನರಾದರು. 

44 ವಯಸ್ಸಿನ ನಟ 2002ರ ಚಲನಚಿತ್ರ ತುಳ್ಳುವದೋ ಇಳಮೈ ಚಿತ್ರದಲ್ಲಿನ ಪಾತ್ರ ಭಾರೀ ಹೆಸರು ತಂದುಕೊಟ್ಟಿತು. ಹಲವಾರು ವರ್ಷಗಳಿಂದ ಯಕೃತ್ತಿನ ಸಂಬಂಧಿತ ಗಂಭೀರ ಅನಾರೋಗ್ಯದಿಂದ ಹೋರಾಡುತ್ತಿದ್ದರು.

ನಟ ಧನುಷ್ ಜೊತೆಗೆ ತುಳ್ಳುವದೋ ಇಳಮೈ ಚಿತ್ರದ ಮೂಲಕ ಅಭಿನಯ್ ಅವರು ತಮ್ಮ ಬಣ್ಣದ ಬದುಕನ್ನು ಶುರುಮಾಡಿದರು

ಅಭಿನಯ್ ದೀರ್ಘಕಾಲದವರೆಗೆ ಯಕೃತ್ತಿನ ತೊಂದರೆಗಳಿಗೆ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದರು. ಇತ್ತೀಚಿನ ತಿಂಗಳುಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರೂ ಅವರ ಆರೋಗ್ಯ ಹದಗೆಟ್ಟಿತ್ತು. 

ಅವರ ಕೊನೆಯ ತಿಂಗಳುಗಳಲ್ಲಿ, ಅವರು ತಮ್ಮ ಚಿಕಿತ್ಸೆಯನ್ನು ಮುಂದುವರಿಸಲು ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದ್ದರು. ಅವರ ತುಳ್ಳುವದೋ ಇಳಮೈ ಸಹನಟ ಧನುಷ್ ಅವರ ವೈದ್ಯಕೀಯ ವೆಚ್ಚಕ್ಕಾಗಿ  5 ಲಕ್ಷ ಆರ್ಥಿಕ ನೆರವು ನೀಡಿದ್ದರು. ಹಾಸ್ಯನಟ ಕೆಪಿವೈ ಬಾಲಾ ರೂ 1 ಲಕ್ಷ ನೀಡಿದರು. ಆದರೆ, ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಅಭಿನಯ್ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಸದ್ಯ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಅವರ ಮನೆಯಲ್ಲಿ ಇರಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾನಟಿ ಕಿರೀಟ ಮುಡಿಗೇರಿಸಿಕೊಂಡ ವಂಶಿಗೆ ಸಿಕ್ಕಾ ಬಹುಮಾನವೆಷ್ಟು ಗೊತ್ತಾ