ಬೆಂಗಳೂರು: ಅಮೃತವರ್ಷಿನಿ ಸೀರಿಯಲ್ ಖ್ಯಾತಿಯ ನಟಿ ರಜಿನಿ ಅವರು ಇಂದು ತಮ್ಮ ಬಹುಕಾಲದ ಗೆಳೆಯನ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಜಿಮ್ ಟ್ರೈನರ್ ಅರುಣ್ ಅವರನ್ನು ನಟಿ ರಜಿನಿ ಅವರು ಮದುವೆಯಾದರು.
ರೀಲ್ಸ್ ಮೂಲಕ ತುಂಬಾನೇ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದ ಈ ಜೋಡಿ, ಪ್ರೀತಿಸುತ್ತಿದ್ದರೆಂಬ ವದಂತಿಯಿತ್ತು. ಈ ವಿಚಾರವನ್ನು ರಜಿನಿ ಅವರು ನಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಎಂದು ಹೇಳಿದ್ದರು. ರೂಮರ್ಸ್‌ಗಳ ಮಧ್ಯೆಯೇ ಈ ಜೋಡಿ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
2012ರಲ್ಲಿ ಪ್ರಸಾರಗೊಂಡ ಅಮೃತವರ್ಷಿಣಿ ಸೀರಿಯಲ್‌ನಲ್ಲಿ ಅಮೃತಾ ಪಾತ್ರಕ್ಕೆ ರಜಿನಿ ಜೀವ ತುಂಬಿದ್ದರು. ಈ ಪಾತ್ರ ಅವರಿಗೆ ತುಂಬಾನೇ ಜನಮನ್ನಣೆ ತಂದುಕೊಟ್ಟಿತು. ಆ ಬಳಿಕ ಸೀರಿಯಲ್‌ನಿಂದ ದೂರ ಉಳಿದಿದ್ದ ರಜಿನಿ ಅವರು ಈಚೆಗೆ ಮತ್ತೇ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದರು.
ಕಳೆದ ಕೆಲ ವರ್ಷಗಳಿಂದ ರಜಿನಿ ಅವರು ಅರುಣ್ ಜತೆಗೆ ಸಾಕಾಷ್ಟು ತಮಾಷೆ ರೀಲ್ಸ್‌ಗಳನ್ನು ಮಾಡಿ, ಸಾಕಷ್ಟು ವೀವ್ಸ್ ಅನ್ನು ಪಡೆದಿದ್ದಾರೆ. ಈ ಜೋಡಿ ನಟನೆಗೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗುತ್ತಿತ್ತು.