ಬೆಂಗಳೂರು: ನಟಿ ಸಮಂತಾ ರುತ್ ಪ್ರಭು ಅವರು ತಮ್ಮ ಗೆಳೆಯನ ಜತೆ ಫೋಸ್ ಕೊಟ್ಟ ವಿಚಾರವಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೇ ಸುದ್ದಿಗೆ ಕಾರಣರಾಗಿದ್ದಾರೆ.
ವಿಚ್ಛೇಧನದ ಬಳಿಕ ಸಮಂತಾ ಅವರು ನಿರ್ಮಾಪಕ ರಾಜ್ ನಿಡಿಮೋರು ಜತೆಗೆ ಡೇಟಿಂಗ್‌ನಲ್ಲಿದ್ದಾರೆಂಬ ಸುದ್ದಿ ಆಗಾಗ ಹರಿದಾಡುತ್ತಲೇ ಇರುತ್ತದೆ. ಆದರೆ ಇದುವರೆಗೆ ಈ ಸಂಬಂಧ ಅವರು ಪ್ರತಿಕ್ರಿಯಿಸಲಿಲ್ಲ. ಆದರೆ ನಟಿ ಸಾಮಾಜಿಕ ಜಾಲತಾಣದಲ್ಲಿ ಆಗಾಗ ರಾಜ್ ನಿಡಿಮೋರು ಜತೆಗಿನ ಆತ್ಮೀಯ ಕ್ಷಣಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇದೀಗ ಈಚೆಗೆ ಸಂಭ್ರಮಾಚರಣೆಯಿಂದ ಅದ್ಭುತ ಫೋಟೋಗಳ ಸರಣಿಯನ್ನು ನಟಿ ಇನ್‌ಸ್ಟಾಗ್ರಾಂನಲ್ಲಿ ಕೈಬಿಟ್ಟರು. ಅದರಲ್ಲಿ ರಾಜ್ ಜತೆಗೆ ಸಮಂತಾ ಇರುವ ಫೋಟೋ ನೋಡಿ, ಪಕ್ಕಾ ಇವರು ಲವ್ ನಲ್ಲಿದ್ದಾರೆಂದು ಅವರ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ರಾಜ್‌ರನ್ನು ಸಮಂತಾ ಅವರು ತಬ್ಬಿ ನಿಂತುಕೊಂಡಿದ್ದಾರೆ. ಈ ಫೋಟೋ ಇಂಟರ್ ನೆಟ್‌ನಲ್ಲಿ ವೈರಲ್ ಆಗಿದೆ.