ನವದೆಹಲಿ: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜಾಮೀನು ಕೋರಿ ಮತ್ತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಪವಿತ್ರಾ ಗೌಡಗೆ ಕೋರ್ಟ್ ತಪರಾಕಿ ನೀಡಿದೆ.
ಈ ಹಿಂದೆ ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಆರೋಪಿಗಳ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಪರಿಣಾಮ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಆರೋಪಿಗಳು ಮತ್ತೆ ಜೈಲು ಪಾಲಾಗಿದ್ದರು.
ಆದರೆ ಇಷ್ಟಕ್ಕೇ ಪವಿತ್ರಾ ಸುಮ್ಮನಾಗಿಲ್ಲ. ಈ ಮೊದಲು ಕರ್ನಾಟಕ ಹೈಕೋರ್ಟ್ ಪವಿತ್ರಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಆದರೆ ಇದನ್ನು ಪುನರ್ ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ಈಗ ಸುಪ್ರೀಂಕೋರ್ಟ್ ಕೂಡಾ ಅರ್ಜಿ ತಳ್ಳಿ ಹಾಕಿದೆ.
ಈಗಾಗಲೇ ನಾವು ಸಾಕಷ್ಟು ದಾಖಲೆಗಳನ್ನು ಪರಿಶೀಲಿಸಿಯೇ ತೀರ್ಪು ಕೊಟ್ಟಿದ್ದೆವು. ಮತ್ತೊಮ್ಮೆ ಪರಿಶೀಲಿಸುವ ಅಗತ್ಯವಿಲ್ಲ. ಈ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿರಸ್ಕರಿಸಿದೆ. ಇದರಿಂದ ಪವಿತ್ರಾಗೆ ಮತ್ತೆ ಹಿನ್ನಡೆಯಾಗಿದೆ.