ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ನ್ಯಾಯಾಲಯಕ್ಕೆ ಇಂದು ನಟ ದರ್ಶನ್ ರನ್ನು ಹಾಜರುಪಡಿಸುವ ವೇಳೆಗೆ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ ಅಭಿಮಾನಿಗಳನ್ನು ಕಂಡು ನ್ಯಾಯಾಧೀಶರೇ ಗರಂ ಆದ ಘಟನೆ ನಡೆದಿದೆ.
ಇಂದು ರೇಣುಕಾಸ್ವಾಮಿ ಮರ್ಡರ್ ಕೇಸ್ ನ ಎಲ್ಲಾ ಆರೋಪಿಗಳ ದೋಷಾರೋಪ ನಿಗದಿಯಾಗಲಿದೆ. ಇದಕ್ಕಾಗಿ ಖುದ್ದಾಗಿ ಎಲ್ಲಾ ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಇದಕ್ಕಾಗಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಕರೆತರಲಾಯಿತು.
ಆದರೆ ನ್ಯಾಯಾಲಯಕ್ಕೆ ದರ್ಶನ್ ಬರುತ್ತಾರೆಂದು ತಿಳಿದು ಅವರನ್ನು ನೋಡಲು ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಎಷ್ಟೆಂದರೆ ಕೋರ್ಟ್ ಆವರಣದಲ್ಲಿ, ಬಾಗಿಲ ಬಳಿಯೂ ಅಭಿಮಾನಿಗಳು ಸೇರಿದ್ದರು. ಇದರಿಂದ ನ್ಯಾಯಾಧೀಶರು ಕಿರಿ ಕಿರಿಗೊಳಗಾದರು.
ಹೀಗಾದ್ರೆ ನಾನು ದೋಷರೋಪ ತಿಳಿಸುವುದು ಹೇಗೆ? ಇಷ್ಟೊಂದು ಜನ ಯಾಕೆ ಸೇರಿದ್ದಾರೆ ಎಂದು ಗರಂ ಆಗಿ ಪ್ರಶ್ನೆ ಮಾಡಿದ್ದಾರೆ. ಸದ್ಯಕ್ಕೆ ಕೋರ್ಟ್ ಕಲಾಪವನ್ನು ಕೆಲವು ಸಮಯ ಮುಂದೂಡಲು ತೀರ್ಮಾನಿಸಿದರು. ಜೊತೆಗೆ ಮುಂದಿನ ದಿನಗಳಲ್ಲಿ ಇನ್ ಕ್ಯಾಮರಾ, ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ ನಡೆಸಲು ತಿರ್ಮಾನಿಸಿದ್ದಾರೆ.