ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಇಂದು ದರ್ಶನ್ ಆಂಡ್ ಗ್ಯಾಂಗ್ ಗೆ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ದೋಷಾರೋಪಪಟ್ಟಿ ನಿಗದಿ ಮುಂದೂಡಿಕೆ ಮಾಡಿದೆ.
									
			
			 
 			
 
 			
					
			        							
								
																	ಇಂದು ಕೋರ್ಟ್ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳ ದೋಷಾರೋಪಪಟ್ಟಿ ನಿಗದಿ ಮಾಡಲು ನಿರ್ಧರಿಸಿತ್ತು. ಆದರೆ ಕೋರ್ಟ್ ಗೆ ಹಾಜರಾದ ದರ್ಶನ್ ಪರ ವಕೀಲ ಸುನಿಲ್ ನಾವು ಇನ್ನೂ ನಮ್ಮ ಕಕ್ಷಿದಾರರ ಜೊತೆ ಮಾತನಾಡಿಲ್ಲ. ಹೀಗಾಗಿ ದೋಷಾರೋಪಪಟ್ಟಿ ನಿಗದಿಗೆ ಸಮಯ ಬೇಕು ಎಂದು ಕೇಳಿದ್ದಾರೆ.
									
										
								
																	ಹೀಗಾಗಿ ಕೋರ್ಟ್ ನವಂಬರ್ 3 ಕ್ಕೆ ದೋಷಾರೋಪಪಟ್ಟಿ ನಿಗದಿ ಮಾಡುವ ಕಲಾಪ ಮುಂದೂಡಿದೆ. ಇನ್ನು, ಈ ವೇಳೆ ದರ್ಶನ್ ಹಾಗೂ ಇತರೆ ಆರೋಪಿಗಳನ್ನು ಖುದ್ದಾಗಿ ಕೋರ್ಟ್ ಗೆ ಹಾಜರುಪಡಿಸಲು ವಕೀಲ ಸುನಿಲ್ ಮನವಿ ಮಾಡಿದ್ದಾರೆ.
									
											
							                     
							
							
			        							
								
																	ದೋಷಾರೋಪ ನಿಗದಿಯಾದ ಬಳಿಕ ಕೇಸ್ ನ ನಿಜವಾದ ವಿಚಾರಣೆ ಆರಂಭವಾಗಲಿದೆ. ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಬಳಿಕ ಒಬ್ಬರಾದ ಮೇಲೊಬ್ಬರಂತೆ ಸಾಕ್ಷ್ಯಗಳ ವಿಚಾರಣೆ ನಡೆಯಲಿದೆ.