ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿರುವ ಅಧಿಕಾರಿಗಳ ಮುಂದೆ ನಟ ದರ್ಶನ್ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಇಲ್ಲಿ ತುಂಬಾ ಹಿಂಸೆಯಾಗುತ್ತಿದೆ ಎಂದಿದ್ದಾರೆ.
ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿರುವ ನಟ ದರ್ಶನ್ ಜೈಲಲ್ಲಿ ಹಾಸಿಗೆ, ದಿಂಬು ಕೊಡ್ತಿಲಲ್ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಈ ನಡುವೆ ಜೈಲಿನ ಪರಿಸ್ಥಿತಿ ಬಗ್ಗೆ ನೀವೇ ಬಂದು ನೋಡಿ ಎಂದು ನ್ಯಾಯಾಧೀಶರಿಗೇ ಮೊರೆಯಿಟ್ಟಿದ್ದರು.
ಅದರಂತೆ ಈಗ ನ್ಯಾಯಾಲಯ ನೇಮಿಸಿದ ಸಮಿತಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಅವರ ಮುಂದೆ ದರ್ಶನ್ ತಮ್ಮ ಅಳಲು ತೋಡಿಕೊಂಡಿದ್ದಾರೆ. ಬೇರೆ ಬ್ಯಾರಕ್ ಗೆ ಶಿಫ್ಟ್ ಮಾಡುವಂತೆ ಮನವಿ ಮಾಡಿದ್ದಾರೆ.
ನ್ಯಾಯಾಲಯ ಹೇಳಿದೆ ಎಂದು ನೆಪಕ್ಕಷ್ಟೇ ವಾಕಿಂಗ್ ಗೆ ಅವಕಾಶ ನೀಡುತ್ತಿದ್ದಾರೆ. ಆದರೆ ಚಿಕ್ಕ ಸ್ಥಳದಲ್ಲಿ ಬಿಸಿಲು, ಬೆಳಕು ಇಲ್ಲದ ಜಾಗದಲ್ಲಿ ವಾಕಿಂಗ್ ಗೆ ಅವಕಾಶ ನೀಡಲಾಗುತ್ತಿದೆ. ತುಂಬಾ ಹಿಂಸೆ ಆಗ್ತಿದೆ ಎಂದು ದರ್ಶನ್ ಅಳಲು ತೋಡಿಕೊಂಡಿದ್ದಾರೆ.