ಬೆಂಗಳೂರು: ಚಿತ್ರರಂಗ ಯಾರೋ ಒಬ್ಬರಿಂದ ಅಲ್ಲ, ಒಬ್ಬರ ಸೊತ್ತಲ್ಲ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಇಂದು ನಟ ದರ್ಶನ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ದರ್ಶನ್ ಮತ್ತು ಉಮಾಪತಿ ಗೌಡ ನಡುವಿನ ವೈಮನಸ್ಯ ಎಲ್ಲರಿಗೂ ಗೊತ್ತಿರುವಂತದ್ದೇ. ದರ್ಶನ್ ಈಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿನಲ್ಲಿದ್ದು ಉಮಾಪತಿ ಗೌಡ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕರಾಗಿರುವ ಹೊಸ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.
ಧ್ರುವ ಸರ್ಜಾ ಜೊತೆ ಹೊಸ ಸಿನಿಮಾ ಘೋಷಣೆ ಮಾಡಿದ ಬಳಿಕ ಇಂದು ಮಾತನಾಡಿದ ಉಮಾಪತಿ ಶ್ರೀನಿವಾಸ್ ಗೌಡ ಇಂಡಸ್ಟ್ರಿ ಯಾರೋ ಒಬ್ಬ ವ್ಯಕ್ತಿಯ ಅಥವಾ ಕುಟುಂಬದ ಸೊತ್ತಲ್ಲ. ಶ್ರದ್ಧೆ, ಶ್ರಮವಹಿಸಿ ಕೆಲಸ ಮಾಡಿದರೆ ಕಲಾ ಸರಸ್ವತಿ ಖಂಡಿತಾ ಕೈ ಹಿಡಿಯುತ್ತಾಳೆ. ಅದೇ ರೀತಿ ಇಂದು ನಾವು ಶ್ರದ್ಧೆಯಿಂದ ಕೆಲಸ ಮಾಡೋಣ ಎಂದು ಕರೆ ನೀಡಿದ್ದಾರೆ.
ದರ್ಶನ್ ಈ ಹಿಂದೆ ಉಮಾಪತಿ ಗೌಡರನ್ನು ತಗಡು ಎಂದು ಪರೋಕ್ಷವಾಗಿ ಬೈದಿದ್ದರು. ಇದಾದ ಮೇಲೆ ಇಬ್ಬರ ನಡುವೆ ವಾಗ್ಯುದ್ಧ ನಡೆಯುತ್ತಲೇ ಇರುತ್ತದೆ. ಇದೀಗ ಉಮಾಪತಿ ಗೌಡ ನೀಡಿರುವ ಹೇಳಿಕೆ ಕೂಡಾ ಪರೋಕ್ಷವಾಗಿ ದರ್ಶನ್ ಗೇ ಹೇಳಿದ್ದು ಎಂದು ವಿಶ್ಲೇಷಿಸಲಾಗುತ್ತಿದೆ.