Select Your Language

Notifications

webdunia
webdunia
webdunia
webdunia

ವಿಷ ಕೊಡಿ ಎಂದು ಅತ್ತು ಕರೆದಿದ್ದಕ್ಕೆ ನಟ ದರ್ಶನ್ ಗೆ ಸಿಕ್ತು ಜೈಲಿನಲ್ಲಿ ಈ ಗ್ಯಾರಂಟಿ

Darshan

Krishnaveni K

ಬೆಂಗಳೂರು , ಗುರುವಾರ, 11 ಸೆಪ್ಟಂಬರ್ 2025 (09:37 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಪ್ರಕರಣದ ಆರೋಪಿ ನಟ ದರ್ಶನ್ ಮೊನ್ನೆಯಷ್ಟೇ ನ್ಯಾಯಾಧೀಶರ ಮುಂದೆ ನನಗೆ ವಿಷ ಕೊಡಿ ಎಂದು ಕೇಳಿದ್ದರು. ಇದೀಗ ಅಷ್ಟು ಅತ್ತು ಕರೆದು ಮಾಡಿದ್ದಕ್ಕೆ ಒಂದು ಬೇಡಿಕೆ ಈಡೇರಿದೆ.

ನನಗೆ ಜೈಲಿನಲ್ಲಿ ನರಕಯಾತನೆ ಆಗುತ್ತಿದೆ. ಬಿಸಿಲು ಕಾಣದೇ ಒಂದು ತಿಂಗಳಾಗಿದೆ. ಕೈಯೆಲ್ಲಾ ಫಂಗಸ್ ಬಂದಿದೆ ಎಂದೆಲ್ಲಾ ದರ್ಶನ್ ಜಡ್ಜ್ ಮುಂದೆ ಅಲವತ್ತುಗೈದಿದ್ದರು. ಕೊನೆಗೂ ನ್ಯಾಯಾಧೀಶರು ಜೈಲಿನಲ್ಲಿ ಹಾಸಿಗೆ, ದಿಂಬು ಮತ್ತು ವಾಕಿಂಗ್ ಗೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಿದ್ದರು.

ಇದೀಗ ನ್ಯಾಯಾಲಯದ ಸೂಚನೆ ಮೇರೆಗೆ ಜೈಲು ಅಧಿಕಾರಿಗಳು ದರ್ಶನ್ ಗೆ ಬೆಳಿಗ್ಗೆ ಮತ್ತು ಸಂಜೆ 40 ನಿಮಿಷ ವಾಕಿಂಗ್ ಮಾಡುವ ಅವಕಾಶ ನೀಡಿದ್ದಾರೆ. ದರ್ಶನ್ ಜೊತೆಗೆ ಬೇರೆಯವರು ಸಂಪರ್ಕ ಮಾಡುವಂತಿಲ್ಲ. ಹೀಗಾಗಿ ಆ ಸಮಯದಲ್ಲಿ ದರ್ಶನ್ ಮಾತ್ರ ವಾಕಿಂಗ್ ಮಾಡಲಿದ್ದಾರೆ. ಅವರ ವಾಕಿಂಗ್ ಮುಗಿದ ಬಳಿಕವಷ್ಟೇ ಬೇರೆ ಕೈದಿಗಳಿಗೆ ವಾಕಿಂಗ್ ಅವಕಾಶ ಸಿಗಲಿದೆ. ದರ್ಶನ್ ವಾಕಿಂಗ್ ಮಾಡುವ ದೃಶ್ಯಗಳೂ ಸಿಸಿಟಿವಿಯಲ್ಲಿ ದಾಖಲಾಗುವಂತೆ ನೋಡಿಕೊಳ್ಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್‌ಬಾಸ್ ವಿನ್ನರ್, ನಟ ಪ್ರಥಮ್‌ಗೆ ಹಲ್ಲೆ ಪ್ರಕರಣ: ರೌಡಿಶೀಟರ್‌ ಅರೆಸ್ಟ್‌