Select Your Language

Notifications

webdunia
webdunia
webdunia
webdunia

ಹಣ್ಣು, ದುಡ್ಡು ಕದೀತಾರೆ ಸಾರ್: ಪರಪ್ಪನ ಅಗ್ರಹಾರದ ಕರಾಳ ಕತೆ ಬಿಚ್ಚಿಟ್ಟ ಮಡೆನೂರು ಮನು

Madenur Manu

Krishnaveni K

ಬೆಂಗಳೂರು , ಬುಧವಾರ, 10 ಸೆಪ್ಟಂಬರ್ 2025 (11:46 IST)
ಬೆಂಗಳೂರು: ಸಹ ನಟಿ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಜೈಲು ಪಾಲಾಗಿದ್ದ ನಟ ಮಡೆನೂರು ಮನು ಈಗ ಖ್ಯಾತ ಪತ್ರಕರ್ತ ಹರೀಶ್ ಅವರ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದಿನಗಳ ಬಗ್ಗೆ ಹಂಚಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಮನು ಸಹ ನಟಿ ಜೊತೆಗೆ ಕಾಂಪ್ರಮೈಸ್ ಮಾಡಿಕೊಂಡು ಕೇಸ್ ಖುಲಾಸೆ ಆಗಿತ್ತು. ಇದಾದ ಬಳಿಕ ಕುಡಿದ ಮತ್ತಿನಲ್ಲಿ ಶಿವಣ್ಣ ಬಗ್ಗೆ ಅವಾಚ್ಯವಾಗಿ ಮಾತನಾಡಿದ ಅಡಿಯೋಗೆ ಸಂಬಂಧಪಟ್ಟಂತೆಯೂ ಕ್ಷಮೆ ಕೇಳಿ ಎಲ್ಲಾ ವಿವಾದಗಳನ್ನು ಸುಖಾಂತ್ಯ ಮಾಡಿಕೊಂಡಿದ್ದರು.

ಇದೀಗ ಅವರು ಹರೀಶ್ ನಾಗರಾಜು ಅವರ ಜೊತೆಗಿನ ಸಂದರ್ಶನದಲ್ಲಿ ಪರಪ್ಪನ ಅಗ್ರಹಾರ ಜೈಲಿನ ಅನುಭವ ಹಂಚಿಕೊಂಡಿದ್ದಾರೆ. ‘ಅದೇನೇ ಇರ್ಲಿ, ಜೈಲು ಎಂದರೆ ನರಕ ಸಾರ್. ಎಂತೆಂಥವರೋ ಇರ್ತಾರೆ, ಎಂಥಹದ್ದೋ ಭಯಾನಕ ಕತೆ ಹೇಳ್ತಾರೆ. ಒಂದು ಬ್ಯಾರಕ್ ನಲ್ಲಿ 70 ಜನ ಇರ್ತಾರೆ. ನಮ್ಮ ಸುತ್ತ ಇರುವವರೆಲ್ಲರದ್ದೂ ಒಂದೊಂದು ಕ್ರಿಮಿನಲ್ ಹಿನ್ನಲೆ. ಒಬ್ಬ ಕುರಿ, ಕೋಳಿ ಕುಯ್ದೆ ಎನ್ನುವ ಹಾಗೆ ಮನುಷ್ಯರಿಗೆ ಚುಚ್ಚಿಬಿಟ್ಟೆ, ಎತ್ತಿ ಬಿಟ್ಟೆ ಅಂತಾನೆ. ಎಷ್ಟೋ ವರ್ಷಗಳಿಂದ 15 ಸಾವಿರ ರೂ. ಶ್ಯೂರಿಟಿ ಕೊಡುವವರೂ ಇಲ್ಲದೇ ಜೈಲಿನಲ್ಲೇ ಇರುವವರೂ ಇರ್ತಾರೆ. ಅವರನ್ನೆಲ್ಲಾ ನೋಡುವಾಗ ಭಯವಾಗುತ್ತದೆ.

ನಂಗಂತೂ ಯಾವಾಗ ಹೊರಗೆ ಬರುತ್ತೇನೋ ಎನಿಸಿತ್ತು. ಅಲ್ಲೇ ಇದ್ದರೆ ಗ್ಯಾರಂಟಿ ಹುಚ್ಚು ಹಿಡಿಯುತ್ತೆ. ಯಾರಾದರೂ ಕರ್ಕೊಂಡು ಹೋಗಿ, ಹೊರಗಡೆ ಹೋಗಿ ಅಭಿಮಾನಿಗಳ ಕೈಯಲ್ಲಿ ಏಟು ತಿಂದು ಸತ್ತರೂ ಚಿಂತೆಯಿಲ್ಲ ಎನಿಸುತ್ತಿತ್ತು. ಸೀನಿಯರ್ ಖೈದಿಗಳು ಹೊಸಬರ ಕೈಲಿ ಟಾಯ್ಲೆಟ್, ಬಾತ್ ರೂಂ ಎಲ್ಲಾ ಕ್ಲೀನ್ ಮಾಡಿಸೋರು. ನಾನು ಸಿನಿಮಾ ನಟ ಎಂದು ಗೊತ್ತಾಗಿ ಪುಣ್ಯಕ್ಕೆ ನನ್ ಕೈಲಿ ಮಾಡಿಸಿರಲಿಲ್ಲ.

ಹಣ್ಣು, ತಿಂಡಿ ಎಲ್ಲಾ ಕದ್ದು ಬಿಡೋರು. 5 ರೂ. ಇದ್ದರೂ ಬಿಡ್ತಿರಲಿಲ್ಲ. ನಮ್ಮ ಕಣ್ಣೆದುರೇ ಹಣ್ಣು ಕಿತ್ತುಕೊಂಡು ತಿನ್ನುವಾಗ ಯಾಕಣ್ಣ ನಂದು ಅದು ಎಂದರೆ ಏಯ್ ಎತ್ತಿಬಿಡ್ತೀನಿ ಎಂದು ಆವಾಜ್ ಹಾಕುತ್ತಿದ್ದರು. ಆಗ ಭಯವಾಗಿ ಆಯ್ತು ಹೋಗ್ಲಿ ಬಿಡಣ್ಣಾ ಎನ್ನಬೇಕಿತ್ತು. ದುಡ್ಡು ಇಟ್ಟುಕೊಳ್ಳಲು ಕಷ್ಟ. ಪ್ಯಾಂಟ್ ದಾರ ಮಧ್ಯೆ ಬೀಡಿ ಕಟ್ಟಿದ ಹಾಗೆ ಯಾರಿಗೂ ಕಾಣದ ಹಾಗೆ ಇಡ್ಬೇಕಿತ್ತು. ಒಟ್ಟಿನಲ್ಲಿ ನರಕ ಸಾರ್ ಜೈಲು’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಷ ಕೊಡಿ ಎಂದಿದ್ದ ದರ್ಶನ್ ಗೆ ಕೊನೆಗೂ ಬಿಗ್ ರಿಲೀಫ್ ನೀಡಿದ ಕೋರ್ಟ್