ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿರುವ ನಟ ದರ್ಶನ್ ಗೆ ಕೋರ್ಟ್ ಆರ್ಡರ್ ಆಗಿದ್ದರೂ ಬೇಕಾಗಿದ್ದನ್ನು ಕೊಡುತ್ತಿಲ್ಲ ಎಂದು ಮತ್ತೆ ದರ್ಶನ್ ಪರ ವಕೀಲರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ನಟ ದರ್ಶನ್ ಗೆ ಬೆನ್ನು ನೋವಿನ ಸಮಸ್ಯೆಯಿದೆ ಎಂದು ನ್ಯಾಯಾಧೀಶರ ಮುಂದೆ ಹೇಳಿದ್ದರು. ಇದಕ್ಕೆ ಹಾಸಿಗೆ, ದಿಂಬು ನೀಡುವಂತೆ ಕೋರ್ಟ್ ಗೆ ಅವರ ಪರ ವಕಿಲರು ಮನವಿ ಮಾಡಿದ್ದರು. ಅದನ್ನು ಕೋರ್ಟ್ ಪುರಸ್ಕರಿಸಿತ್ತು. ಆದರೆ ಕೋರ್ಟ್ ಹೇಳಿದರೂ ದರ್ಶನ್ ಗೆ ಸವಲತ್ತು ಸಿಕ್ಕಿಲ್ಲ.
ಆದರೆ ಕೋರ್ಟ್ ಆರ್ಡರ್ ಆಗಿದ್ದರೂ ಕನಿಷ್ಠ ಸವಲತ್ತುಗಳನ್ನು ನೀಡಿಲ್ಲ ಎಂದು ವಕೀಲರು ನ್ಯಾಯಾಲಯಕ್ಕೆ ಪುನರ್ ಪರಿಶೀಲಿಸಲು ಅರ್ಜಿ ಹಾಕಿದ್ದಾರೆ. ಸಿಆರ್ ಪಿಸಿ 310 ರ ಅಡಿ ಅರ್ಜಿ ಸಲ್ಲಿಸಲಾಗಿದೆ. ಕೋರ್ಟ್ ಆದೇಶ ಪಾಲಿಸಿದ್ದೇವೆ ಎಂದು ಜೈಲು ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆದರೆ ಅಸಲಿಗೆ ಸವಲತ್ತು ನೀಡಿಯೇ ಇಲ್ಲ ಎಂದು ವಕೀಲರು ಆರೋಪಿಸಿದ್ದಾರೆ. ಸದ್ಯಕ್ಕೆ ದರ್ಶನ್ ಕ್ವಾರಂಟೈನ್ ಸೆಲ್ ನಲ್ಲಿದ್ದಾರೆ. ಇದೀಗ ಅವರ ಪರ ವಕೀಲರ ಆರೋಪಗಳಿಗೆ ಕೋರ್ಟ್ ಯಾವ ರೀತಿ ಉತ್ತರ ಕೊಡುತ್ತದೆ ನೋಡಬೇಕಿದೆ.