ಬೆಂಗಳೂರು: ಒಂದೆಡೆ ಮಗ ವಿನೇಶ್ ಬರ್ತ್ ಡೇ. ಇನ್ನೊಂದೆಡೆ ಕೋರ್ಟ್ ನಲ್ಲಿ ಅಗ್ನಿ ಪರೀಕ್ಷೆ. ನಟ ದರ್ಶನ್ ಗೆ ಒಂದೆಡೆ ಸಿಹಿ, ಇನ್ನೊಂದೆಡೆ ಆತಂಕ. ಒಟ್ಟಿನಲ್ಲಿ ದಾಸನಿಗೆ ಎದೆಯಲ್ಲಿ ಢವ ಢವ..
									
			
			 
 			
 
 			
					
			        							
								
																	ಹುಟ್ಟುಹಬ್ಬದಂದು ಮಗನ ಜೊತೆಗಿರುವ ಭಾಗ್ಯ ದರ್ಶನ್ ಗಿಲ್ಲ. ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜೈಲು ಹಕ್ಕಿಯಾಗಿರುವ ದರ್ಶನ್ ಮಗನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ನಡುವೆ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಫ್ಯಾಮಿಲಿ ಫೋಟೋ ಹಾಕಿ ಮಗನಿಗೆ ವಿಶ್ ಮಾಡಿದ್ದಾರೆ.
									
										
								
																	ಈ ಕೆಲವು ದಿನಗಳನ್ನು ನೀನು ಹೇಗೆ ಶಾಂತಚಿತ್ತದಿಂದ, ಕೇರ್ ಮತ್ತು ಧೈರ್ಯದಿಂದ ಎದುರಿಸಿದೆ ಎಂದು ನೋಡಿದರೆ ನನಗೆ ಹೆಮ್ಮೆಯಾಗುತ್ತಿದೆ. ನೀನು ಎಷ್ಟೇ ದೊಡ್ಡವನಾದರೂ ನನಗೆ ಪುಟ್ಟ ಕಂದ. ಜೀವನದಲ್ಲಿ ಎತ್ತರಕ್ಕೆ ಬೆಳೆ ಮಗನೇ. ನಾನು, ನಿನ್ನ ಅಪ್ಪ ಜೊತೆಗೇ ಇದ್ದೇವೆ ಎಂಬುದನ್ನು ಮರೆಯಬೇಡ ಎಂದು ವಿಜಯಲಕ್ಷ್ಮಿ ಮಗನಿಗೆ ವಿಶ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
									
											
							                     
							
							
			        							
								
																	ಒಂದೆಡೆ ಮಗನನನ್ನು ಮಿಸ್ ಮಾಡಿಕೊಳ್ಳುತ್ತಿರುವ ಬೇಸರವಾದರೆ ಇನ್ನೊಂದೆಡೆ ದರ್ಶನ್ ಗೆ ಇಂದು ಕೋರ್ಟ್ ನಲ್ಲಿ ದೋಷಾರೋಪ ನಿಗದಿಯಾಗುವ ಟೆನ್ಷನ್. ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳ ದೋಷಾರೋಪ ಇಂದು ಕೋರ್ಟ್ ನಲ್ಲಿ ನಿಗದಿಯಾಗಲಿದೆ. ಹೀಗಾಗಿ ಇಂದು ಎಲ್ಲಾ ಆರೋಪಿಗಳೂ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ.
									
			                     
							
							
			        							
								
																	ಈ ವೇಳೆ ಎಲ್ಲಾ ಆರೋಪಿಗಳ ಮುಂದೆ ಅವರ ಮೇಲೆ ನಿಗದಿಯಾಗಿರುವ ಆರೋಪಗಳೇನು ಎಂದು ನ್ಯಾಯಾಧೀಶರು ಓದಲಿದ್ದು, ಬಳಿಕ ಅದನ್ನು ಅವರು ಒಪ್ಪಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಲಿದ್ದಾರೆ. ಈ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡರೆ ಅದಕ್ಕೆ ತಕ್ಕ ಶಿಕ್ಷೆ ನಿಗದಿಯಾಗುತ್ತದೆ. ಒಪ್ಪದೇ ಹೋದರೆ ಮುಂದಿನ ಹಂತದಲ್ಲಿ ಪಟ್ಟಿಯಲ್ಲಿರುವ ಸಾಕ್ಷ್ಯಗಳ ವಿಚಾರಣೆ ನಡೆಯುತ್ತದೆ. ಹೀಗಾಗಿ ಇಂದು ದರ್ಶನ್ ಗೆ ಮಹತ್ವದ ದಿನವಾಗಿದೆ.