Select Your Language

Notifications

webdunia
webdunia
webdunia
webdunia

ಖಾಕಿ ಉಟ್ಟು ರಿಕ್ಷಾ ಏರಿದ ರಚಿತಾ ರಾಮ್ ನಡೆಗೆ ಫ್ಯಾನ್ಸ್‌ ಫಿದಾ

Dimple Queen Rachita Ram

Sampriya

ಬೆಂಗಳೂರು , ಗುರುವಾರ, 30 ಅಕ್ಟೋಬರ್ 2025 (20:39 IST)
Photo Credit X
ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಅವರನ್ನು  ಬೆಂಗಳೂರಿನ ಆಟೋ ಚಾಲಕರ ಸಂಘದ ರಾಯಭಾರಿಯನ್ನಾಗಿ ನೇಮಿಸಲಾಗಿದೆ. ಈ ಮೂಲಕ ನಟಿ ಹೊಸ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು, 
ಸ್ವತಃ ಖಾಕಿ ಶರ್ಟ್ ಧರಿಸಿ ಆಟೋ ಚಲಾಯಿಸಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ನಟಿಯ ಆರ್‌ಆರ್‌ ನಗರದಲ್ಲಿರುವ ನಿವಾಸಕ್ಕೆ ಬಂದ ಬೆಂಗಳೂರಿನ ನೂರಾರು ಆಟೋ ಚಾಲಕರು ಮತ್ತು ಹಲವು ಮಹಿಳಾ ಆಟೋ ಚಾಲಕಿಯರು ಅವರನ್ನು ಅಧಿಕೃತವಾಗಿ ರಾಯಭಾರಿಯನ್ನಾಗಿ ಸ್ವಾಗತಿಸಿದ್ದಾರೆ. 

ಆಟೋ ಚಾಲಕರ ವಸ್ತ್ರದಲ್ಲೇ ಆಟೋ ಮುಂದೆ ನಿಂತು ಪೋಸ್ ನೀಡಿದ ರಚಿತಾ, ಈ ವಿಶೇಷ ಕ್ಷಣಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

ಇನ್ನೂ ರಚಿತಾ ರಾಮ್ ಅವರು ಪ್ರತಿಕ್ರಿಯಿಸಿ, ಅತಿರಥ ಮಹಾರಥ ಸಾರಥಿಗಳಿಗೆ ನನ್ನ ಸಮಸ್ಕಾರ, ನನ್ನನ್ನು ಆಟೋ ಚಾಲಕರ ಸಂಘದ ಬ್ರ್ಯಾಂಡ್‌ ಅಂಬಾಸಿಡರ್ ಆಗಿ ನೇಮಕ ಮಾಡಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ. 

ಇನ್ನೂ ನಟಿಯ ಸರಳತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲು: ಇದು ಬೇರೆ ನಟರಿಗೂ ಅನ್ವಯಿಸುವ ವಿಚಾರ