Select Your Language

Notifications

webdunia
webdunia
webdunia
webdunia

ಬೆಳಕಿಲ್ಲದ ದೀಪಾವಳಿಯೊಂದಿಗೆ ನಟ ದರ್ಶನ್‌ಗೆ ಬೆನ್ನು ನೋವಿನ ಸಂಕಟ

Actor Darshan

Sampriya

ಬೆಂಗಳೂರು , ಸೋಮವಾರ, 20 ಅಕ್ಟೋಬರ್ 2025 (21:58 IST)
ಪ್ರತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ನಟ ದರ್ಶನ್ ಗೆ ಈ ಬಾರಿ ಬೆಳಕಿಲ್ಲದ ದೀಪಾವಳಿಯಾಗಿದೆ. 
ಇತ್ತ ಬೆನ್ನು ನೋವು ಹಿನ್ನೆಲೆ ಫಿಸಿಯೋಥೆರಪಿ ನೀಡಲು ಜೈಲಿನ ವೈದ್ಯರು ಪತ್ರ ಬರೆದಿದ್ದಾರೆ.

ಚಿತ್ರದುರ್ಗಾದ ರೇಣುಕಾಸ್ವಾಮಿ ಕೊಲೆ‌ ಪ್ರಕರಣದಲ್ಲಿ ಎರಡನರೆ ಭಾರಿ ಜೈಲು ಸೇರಿರುವ ನಟ‌ ದಿನನಿತ್ಯವೂ ಒಂದಲ್ಲ‌‌ ಒಂದುಬಕಾಟ ತಪ್ಪಿಲ್ಲ. 

ಪ್ರತಿ‌ ವರ್ಷವೂ ದರ್ಶನ್‌ ಅದ್ದೂರಿಯಾಗಿ ದೀಪಾವಳಿಯನ್ನು ಆಚರಿಸುತ್ತಿದ್ದರು. 

ದರ್ಶನ್ ಈಗ ಸೆಲ್‌ನಲ್ಲಿ ಬೆಳಕು ನೋಡುವಂತಾಗಿದೆ. ಹಾಸಿಗೆ ದಿಂಬಿಲ್ಲ, ಕ್ವಾರಂಟೈನ್ ಸೆಲ್‌ನಲ್ಲೇ ಇರುವ ಅನಿವಾರ್ಯ
ಸ್ಥಿತಿಯಲ್ಲಿದ್ದು, ಕನಿಷ್ಟ ಸೌಲಭ್ಯದ ವ್ಯವಸ್ಥೆ ಸರಿಯಿದೆ ಎಂದು ಕಾನೂನು ಸೇವಾ ಪ್ರಾಧಿಕಾರ ಕೊಟ್ಟಿರೋ ವರದಿಯಿಂದ ನೊಂದಿದ್ದಾರೆ ಎನ್ನಲಾಗಿದೆ.

ಇನ್ನೂ ಜೈಲಿನಲ್ಲಿ ದರ್ಶನ್‌ಗೆ ಈಗಾಗ್ಲೇ ಬೆನ್ನು ನೋವಿಗೆ ಹೀಟಿಂಗ್ ಬೆಲ್ಟ್ ಹಾಗೂ ಚೇರ್ ನೀಡಲಾಗಿದೆ. ಈ ನಡುವೆ ಕೇಂದ್ರ ಕಾರಾಗೃಹ ಆಸ್ಪತ್ರೆ ಮುಖ್ಯ ವೈದ್ಯರು, ಸಿ.ವಿ ರಾಮನ್ ನಗರ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಿಗೆ ಪತ್ರ ಬರೆದಿದ್ದಾರೆ. 

ಇನ್ನೂ ಈ ಬಾರಿಯೂ ಬೆನ್ನುನೋವಿಗೆ ಒಳಗಾಗಿರುವ ನಟ ದರ್ಶನ್ ಗೆ  ಮೊದಲು ಜೈಲಿನ ವೈದ್ಯರ ತಂಡ ಚಿಕಿತ್ಸೆ ನೀಡಿತ್ತು. ಬಳಿಕ ಸಿ.ವಿ ರಾಮನ್ ಆಸ್ಪತ್ರೆ ಫಿಸಿಯೋಥೆರಪಿ ತಂಡದಿಂದ ಚಿಕಿತ್ಸೆ ನೀಡಲಾಗಿತ್ತು. ಇದೀಗ ಚಿಕಿತ್ಸೆ ಅಗತ್ಯ ಇರುವವರೆಗೂ ಕಾರಾಗೃಹಕ್ಕೆ ವೈದ್ಯರ ತಂಡ ನಿಯೋಜಿಸಲು ಹಾಗೂ ಹೀಟಿಂಗ್ ಬೆಲ್ಟ್ ನೀಡಲು ಮನವಿ ಮಾಡಲಾಗಿದೆ. ಕಾನೂನು ಸೇವಾ ಪ್ರಾಧಿಕಾರದ ವರದಿಯಲ್ಲಿ ಬೆನ್ನು ನೋವಿನ ಬಗ್ಗೆಯೂ ಉಲ್ಲೇಖವಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇವರ ಮಕ್ಕಳಿಗೆ ದೀಪಾವಳಿಗೆ ಸರ್ಪ್ರೈಸ್ ನೀಡಿದ ಸಮಂತಾ ರುತ್ ಪ್ರಭು