Select Your Language

Notifications

webdunia
webdunia
webdunia
webdunia

ದೇಶದ ಪ್ರಮುಖ ಪ್ರಕರಣಗಳಲ್ಲಿ 2ನೇ ಸ್ಥಾನ ಪಡೆದ ಅಪರಾಧ ಪ್ರಕರಣ ಯಾವುದು ಗೊತ್ತಾ

Karnataka Top Crime Case

Sampriya

ನವದೆಹಲಿ , ಸೋಮವಾರ, 6 ಅಕ್ಟೋಬರ್ 2025 (17:37 IST)
Photo Credit X
ನವದೆಹಲಿ: 2024-25ರ ಅವಧಿಯಲ್ಲಿ ನಡೆದ ಅಪರಾಧ ಪ್ರಕರಣಗಳಲ್ಲಿ ದೇಶದಲ್ಲೇ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. 

ಭಾರತದಲ್ಲಿ ನಡೆದ ಪ್ರಕರಣದಲ್ಲಿ ಕೋಲ್ಕತ್ತಾದಲ್ಲಿ ನಡೆದ ಟ್ರೈನಿ ವೈದ್ಯೆ ಅತ್ಯಾಚಾರ ಪ್ರಕರಣ ಮೊದಲನೇ ಸ್ಥಾನ ಪಡೆದುಕೊಂಡಿದ್ದರೆ, ದರ್ಶನ್ ಅವರ ಗ್ಯಾಂಗ್‌ನಿಂದ ಹತ್ಯೆಗೀಡಾದ ರೇಣುಕಾಸ್ವಮಿ ಪ್ರಕರಣ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಈಗಾಗಲೇ ಈ ಪ್ರಕರಣ ಸಂಬಂಧ ಐದು ಆರೋಪಿಗಳು ಜೈಲಿನಲ್ಲಿದ್ದಾರೆ.

ಒಂದು ವರ್ಷದ ಅವಧಿಯಲ್ಲಿ ಘಟನೆಯ ತೀವ್ರತೆ ಹಾಗೂ ಸೆನ್ಷೇಷನಲ್ ಎನಿಸಿಕೊಂಡ ಪ್ರಕರಣಗಳ ಆಧಾರದ ಮೇಲೆ ಇವುಗಳನ್ನು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೇಶದ ಟಾಪ್ 6ರಲ್ಲಿ ರೇಣುಕಾಸ್ವಾಮಿ ಪ್ರಕರಣ ಎರಡನೇ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಉಳಿದಂತೆ ಪುಣೇ ಪೋರ್ಷೆ ಕೇಸ್, ಹೈದರಾಬಾದ್ ಟೆಕ್ ಸ್ಕ್ಯಾಮ್, ಗಾಯಕ ಜುಬೀನ್ ಗಾರ್ಗ್ ಶಂಕ್ಯಾಸ್ಪದ ಸಾವು ಪ್ರಮುಖ ಪ್ರಕರಣ ಎನಿಸಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ತನ್ನ ಅಧಿಕಾರದಲ್ಲಿ ಈ ಕೆಲಸ ಮಾಡಿದ್ದರೆ ಇಂದೇ ಸಚಿವ ಸ್ಥಾನಕ್ಕೆ ರಾಜೀನಾಮೆ: ಜಮೀರ್