ಹಿಟ್ ಸಿನಿಮಾಗಳಲ್ಲಿ ಒಂದಾಗಿರುವ ಕಾಂಚನಾ ನಾಲ್ಕರ ಭಾಗಕ್ಕೆ ಇದೀಗ ವರ್ಗದ ಬಗ್ಗೆ ಭಾರೀ ಕುತೂಹಲವನ್ನು ಮೂಡಿಸಿದೆ. ಈ ಮಧ್ಯೆ ಇದೀಗ ಈ ಚಿತ್ರ ತಂಡದ ಜತೆ ನಟಿ ಪೂಜಾ ಹೆಗ್ಡೆ ಮತ್ತು ನೋರಾ ಫತೇಹಿ ಸೇರಿಕೊಂಡಿದ್ದಾರೆ.
ಈ ಮೂಲಕ ನೋರಾ ಫತೇಹಿ ಅವರು ಅವರು ತಮಿಳು ಚಿತ್ರರಂಗಕ್ಕೆ ಪ್ರವೇಶವನ್ನು ಮಾಡುತ್ತಿದ್ದಾರೆ.
ಇತರ ಪಾತ್ರವರ್ಗದ ಸದಸ್ಯರನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ಹಾರರ್, ಕಾಮಿಡಿ, ಥ್ರಿಲ್ಲರ್ ಸಿನಿಮಾ ಒಂದಕ್ಕಿಂತ ಒಂದು ಹಿಟ್ ಪ್ರದರ್ಶನವಾಯಿತು. ಇದೀಗ ನಾಲ್ಕನೇ ಭಾಗಕ್ಕೆ ಪಾತ್ರ ವರ್ಗ ಸಿದ್ಧವಾಗಿದೆ.
ಇಡೀ ಕಾಂಚನಾ ಸರಣಿಯನ್ನು ರಾಘವ ಲಾರೆನ್ಸ್ ನಿರ್ದೇಶಿಸಿದ್ದಾರೆ ಮತ್ತು ಅವರು ನಾಯಕರಾಗಿ ನಟಿಸಿದ್ದಾರೆ.