ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ 60 ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ಹಾಸ್ಯದ ಪೋಸ್ಟ್ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ಗಮನ ಸೆಳೆದರು.
ತಮ್ಮ ಸಂದೇಶದಲ್ಲಿ, ತರೂರ್ ಅವರು ನಟನಿಗೆ ನಿಜವಾಗಿಯೂ 60 ವರ್ಷ ವಯಸ್ಸಾಗಿದೆಯೇ ಎಂದು ತಮಾಷೆಯಾಗಿ ಪ್ರಶ್ನಿಸಿದರು, ಸಮರ್ಥನೆಯನ್ನು ಬೆಂಬಲಿಸಲು "ಯಾವುದೇ ದೃಶ್ಯ ಸಾಕ್ಷ್ಯವಿಲ್ಲ" ಎಂದು ಹೇಳಿದರು ಮತ್ತು SRK ಹಿಮ್ಮುಖವಾಗಿ ವಯಸ್ಸಾಗಿರಬಹುದು ಎಂದು ಹೇಳಬಹುದು ಎಂದಿದ್ದಾರೆ.
ಶಾರುಕ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮಗೆ 60 ತುಂಬಿದೆ ಎಂಬುವುದರ ಬಗ್ಗೆ ನನಗೆ ಅನುಮಾನಗಳಿಗೆ. ನಾನಷ್ಟೆ ಅಲ್ಲ ಸತ್ಯಶೋಧಕರು, ವಿಧಿವಿಜ್ಞಾನ ತಜ್ಞರು ಕೂಡ ಈ ಕುರಿತು ತನಿಖೆ ನಡೆಸಿದ್ದು, ನಿಮಗೆ 60 ವರ್ಷ ತುಂಬಿದೆ ಎಂಬುವುದನ್ನು ವಾಸ್ತಕವಿಕವಾಗಿ ದೃಢೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ಕಾಲೆಳೆದರು.
ದಿನ ಕಾಳೆದಂತೆ ನಿಮ್ಮ ವಯಸ್ಸು ಹಿಮ್ಮುಖವಾಗಿ ಚಲಿಸುತ್ತಿದೆ. ನಿಮ್ಮನ್ನು ಕಂಡರೆ ಹಾಲಿವುಡ್ ಸೂಪರ್ ಹಿಟ್ ಸಿನೆಮಾ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್ ಸಿನಿಮಾದ ಬಾಲಿವುಡ್ ಅವತರಿಣಿಕೆಯಂತೆ ಕಾಣುತ್ತದೆ. ನಿಜಕ್ಕೂ ನಿಮಗೆ ಅರವತ್ತಾಗಿದೆ ಎಂದು ಹೇಳುವುದು ಕಷ್ಟ ಎಂದಿದ್ದಾರೆ.
ಶಾರುಖ್ ಖಾನ್‌ಗೆ