ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಗೆ ಕೋರ್ಟ್ ಚಿಂತೆಯಾದರೆ ಅವರ ಅಭಿಮಾನಿಗಳಿಗೆ ನಮ್ ಬಾಸ್ ನ ನೋಡಬಹುದು ಎಂಬ ಖುಷಿ.
ದರ್ಶನ್ ಮತ್ತು ಪ್ರಮುಖ 7 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಂದು ಎಲ್ಲಾ ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಲಾಗುತ್ತಿದೆ. ಕೋರ್ಟ್ ನಲ್ಲಿ ಇಂದು ದೋಷಾರೋಪ ಪಟ್ಟಿ ನಿಗದಿಯಾಗಲಿದ್ದು ಎಲ್ಲಾ ಆರೋಪಿಗಳೂ ಹಾಜರಿರಬೇಕಾಗುತ್ತದೆ.
ಪ್ರತಿಯೊಬ್ಬ ಆರೋಪಿಯನ್ನೂ ಕೋರ್ಟ್ ಕಟಕಟೆಗೆ ಕರೆಸಿ ನ್ಯಾಯಾಧೀಶರು ಅವರ ಮೇಲಿರುವ ಆರೋಪಗಳನ್ನು ಓದಿ ಹೇಳಲಿದ್ದಾರೆ. ಇದಕ್ಕೆ ಆರೋಪಿಗಳು ಒಪ್ಪದೇ ಇದ್ದಲ್ಲಿ ಸಾಕ್ಷಿಗಳನ್ನು ಕರೆಸಿ ಮುಂದಿನ ವಿಚಾರಣೆ ನಡೆಯಲಿದೆ. ಈ ಪ್ರಕ್ರಿಯೆಗಾಗಿ ದರ್ಶನ್ ಇಂದು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಿರಲಿದ್ದಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಅವರನ್ನು ನೋಡಲು ಕಾಯ್ತಿದ್ದಾರೆ.
ಕೆಲವರಂತೂ ಸೋಷಿಯಲ್ ಮೀಡಿಯಾದಲ್ಲಿ ಕೋರ್ಟ್ ನಲ್ಲಿ ಏನು ಬೆಕಾದರೂ ಆಗಲಿ, ನಾವು ನಮ್ ಬಾಸ್ ನೋಡಿ ನಾಲ್ಕೈದು ತಿಂಗಳಾಯ್ತು. ಈವತ್ತು ಅವರನ್ನು ನೋಡಬಹುದು ಎಂದು ಬಂದು ನಿಂತಿದ್ದಾರೆ. ಇದನ್ನು ನೋಡುತ್ತಿದ್ದರೆ ದರ್ಶನ್ ಗೆ ಕೋರ್ಟ್ ನಲ್ಲಿ ಏನಾಗಬಹುದೋ ಎಂಬ ಚಿಂತೆಯಾದರೆ ಅವರ ಫ್ಯಾನ್ಸ್ ಗೆ ಬಾಸ್ ನೋಡುವ ಸಂಭ್ರಮ ಎಂದರೂ ತಪ್ಪಾಗಲಾರದು.