ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಎರಡನೇ ಬಾರಿ ಬಂಧನವಾದ ಬಳಿಕ ಇದೇ ಮೊದಲ ಬಾರಿಗೆ ದರ್ಶನ್ ಹಾಗೂ ಪವಿತ್ರಾ ಗೌಡ ಪರಸ್ಪರ ಮುಖಾಮುಖಿಯಾಗಿದ್ದಾರೆ. ಈ ವೇಳೆ ದರ್ಶನ್ ನೋಡಿ ಪವಿತ್ರಾ ಮಾಡಿದ್ದೇನು?
ಇಂದು ದೋಷಾರೋಪ ನಿಗದಿ ಮಾಡುವ ನಿಮಿತ್ತ ಎಲ್ಲಾ ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಹಾಗೂ ಪವಿತ್ರಾ ಗೌಡರನ್ನೂ ಪ್ರತ್ಯೇಕ ವಾಹನದಲ್ಲಿ ಕೋರ್ಟ್ ಗೆ ಕರೆತರಲಾಗಿದೆ.
ಈ ವೇಳೆ ಕೋರ್ಟ್ ಆವರಣದಲ್ಲಿ ದರ್ಶನ್ ನೋಡಿ ಪವಿತ್ರಾ ಗೌಡ ಹತ್ತಿರ ಬರುವಂತೆ ಕರೆದಿದ್ದಾರೆ. ಹೀಗಾಗಿ ದರ್ಶನ್, ಪವಿತ್ರಾ ಪಕ್ಕ ಹೋಗಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಕೆಲವು ಹೊತ್ತು ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.
ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಸಿಲುಕಿಕೊಂಡ ಬಳಿಕ ಪವಿತ್ರಾರಿಂದ ದರ್ಶನ್ ಅಂತರ ಕಾಯ್ದುಕೊಂಡಿದ್ದರು. ಇದೀಗ ಒಂದೇ ಜೈಲಿನಲ್ಲಿದ್ದರೂ ಪರಸ್ಪರ ಭೇಟಿಗೆ ಅವಕಾಶವಿಲ್ಲ. ಈ ಹಿಂದೆ ವಿಚಾರಣೆ ಸಂದರ್ಭದಲ್ಲಿ ಪರಸ್ಪರ ಸಿಕ್ಕಾಗಿ ಮಾತನಾಡಿದ್ದು ಇದೆ.