Select Your Language

Notifications

webdunia
webdunia
webdunia
webdunia

ನನಗಾಗಿ ನನ್ನ ಹುಡುಗ ಯುದ್ಧ ಮಾಡಕ್ಕೂ ರೆಡಿ ಇರಬೇಕು: ರಶ್ಮಿಕಾ ಮಂದಣ್ಣ

Rashmika Mandanna

Krishnaveni K

ಹೈದರಾಬಾದ್ , ಶನಿವಾರ, 8 ನವೆಂಬರ್ 2025 (11:23 IST)
ಹೈದರಾಬಾದ್: ನಿಮ್ಮ ಗಂಡನಾಗುವವನು ಹೇಗಿರಬೇಕು ಎಂದು ಕೇಳಿದ್ದಕ್ಕೆ ನಟಿ ರಶ್ಮಿಕಾ ಮಂದಣ್ಣ ನನಗಾಗಿ ಯುದ್ಧ ಮಾಡಲೂ ರೆಡಿ ಇರಬೇಕು ಎಂದಿದ್ದಾರೆ.

ವಿಜಯ್ ದೇವರಕೊಂಡ ಜೊತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೇ ರಶ್ಮಿಕಾ ಈ ರೀತಿ ಹೇಳಿದ್ದಾರೆ. ಗರ್ಲ್ ಫ್ರೆಂಡ್ ಸಿನಿಮಾ ಬಿಡುಗಡೆಯಾದ ಖುಷಿಯಲ್ಲಿರುವ ರಶ್ಮಿಕಾ ಪ್ರಮೋಷನಲ್ ಸಂದರ್ಶನವೊಂದರಲ್ಲಿ ತಮ್ಮ ಜೀವನ ಸಂಗಾತಿ ಹೇಗಿರಬೇಕು ಎಂದು ಹೇಳಿಕೊಂಡಿದ್ದಾರೆ.

ನನ್ನ ಮದುವೆಯಾಗುವ ಹುಡುಗ ನನಗಾಗಿ ಯುದ್ಧವನ್ನೇ ಮಾಡುವವನಾಗಿರಬೇಕು. ನನಗಾಗಿ ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳಲು ರೆಡಿ ಇರಬೇಕು. ಇಡೀ ಜಗತ್ತೇ ನನ್ನ ವಿರುದ್ಧಇದ್ದರೂ ನನ್ನ ಪರವಾಗಿ ನಿಲ್ಲಬೇಕು ಎಂದು ಪಟ್ಟಿ ಮಾಡಿ ಹೇಳಿದ್ದಾರೆ.

ಆದರೆ ನೇರವಾಗಿ ವಿಜಯ್ ದೇವರಕೊಂಡ ಜೊತೆ ಮದುವೆಯಾಗುವ ವಿಚಾರವನ್ನು ಒಪ್ಪಿಕೊಂಡಿಲ್ಲ. ಬದಲಾಗಿ ತಮ್ಮ ಸಂಗಾತಿ ಬಗೆಗಿನ ಕನಸುಗಳನ್ನು ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೃತಿಕ್ ರೋಷನ್ ಮಾಜಿ ಪತ್ನಿ ಸುಸ್ಸಾನ್ನೆ ಖಾನ್ ತಾಯಿ ಇನ್ನಿಲ್ಲ