ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸ್ಸಾನ್ನೆ ಖಾನ್ ಅವರ 81ವರ್ಷದ ತಾಯಿ ಜರೀನ್ ಖಾನ್ ಅವರು ಇಂದು ವಿಧಿವಶರಾದರು.
ಹಿರಿಯ ನಟ ಸಂಜಯ್ ಖಾನ್ ಅವರ ಪತ್ನಿ ಮತ್ತು ನಟ ಜಾಯೆದ್ ಖಾನ್, ಡಿಸೈನರ್ ಸುಸ್ಸಾನ್ನೆ ಖಾನ್ ಮತ್ತು ಫರಾ ಖಾನ್ ಅಲಿ ತಾಯಿಯನ್ನು ಕಳೆದುಕೊಂಡಿದ್ದಾರೆ.
ಇನ್ನೂ ಜರೀನ್ ಅವರ ಅಂತಿಮ ವಿಧಿ ವಿಧಾನದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ಸುಸ್ಸಾನ್ನೆ ಖಾನ್ ಮಾಜಿ ಪತಿ ಹೃತಿಕ್ ರೋಷನ್ ಕೂಡಾ ಭಾಗಿಯಾದರು.
ಝರಿನ್ ಅವರು 1966 ರಲ್ಲಿ ಸಂಜಯ್ ಖಾನ್ ಅವರನ್ನು ವಿವಾಹವಾದರು. ಅವರು ತಮ್ಮ ನಾಲ್ಕು ಮಕ್ಕಳನ್ನು ಹೊಂದಿದ್ದಾರೆ: ಜಾಯೆದ್ ಖಾನ್, ಸುಸ್ಸಾನೆ ಖಾನ್, ಫರಾಹ್ ಖಾನ್ ಅಲಿ ಮತ್ತು ಸಿಮೋನ್ ಅರೋರಾ.