Select Your Language

Notifications

webdunia
webdunia
webdunia
webdunia

ಸಿನಿಮಾ ಸಕ್ಸಸ್ ನಡುವೆ ದಿಢೀರನೆ ಠಾಣೆ ಮೆಟ್ಟಿಲೇರಿದ ಕಾಂತಾರ ಬೆಡಗಿ ರುಕ್ಮಿಣಿ ವಸಂತ್

Rukmini Vasanth

Sampriya

ಬೆಂಗಳೂರು , ಶುಕ್ರವಾರ, 7 ನವೆಂಬರ್ 2025 (19:28 IST)
Photo Credit X
ಬೆಂಗಳೂರು: ಕಾಂತಾರ ಚಾಪ್ಟರ್ 1ನಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಎಲ್ಲರ ಮನಗೆದ್ದ ಚೆಲುವೆ ರುಕ್ಮಿಣಿ ವಸಂತ್ ಇದೀಗ ದಿಢೀರನೆ ಠಾಣೆ ಮೆಟ್ಟಿಲೇರಿದ್ದಾರೆ. 

ತನ್ನ ಹೆಸರಿನಲ್ಲಿ ಕರೆ ಹಾಗೂ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ನಟಿ  ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಕರೆ ಮಾಡುತ್ತಿರುವ ಸಂಖ್ಯೆಯನ್ನೂ ಬಹಿರಂಗವಾಗಿ ಪೋಸ್ಟ್ ಮಾಡಿರುವ ರುಕ್ಮಿಣಿ, ನನ್ನ ಹೆಸರಿನಲ್ಲಿ ನಕಲಿ ಕರೆ ಮತ್ತು ಮಸೇಜ್ ಮಾಡುತ್ತಿದ್ದಾರೆ. ಅದಕ್ಕೆ ಉತ್ತರಿಸಬೇಡಿ ಎಂದು ಮನವಿ ಮಾಡಿದ್ದಾರೆ.

ನನ್ನ ಹೆಸರಿನಲ್ಲಿ 9445893273 ಸಂಖ್ಯೆಯಿಂದ ಇತರರಿಗೆ ಕರೆ ಮತ್ತು ಮೆಸೇಜ್ ಮಾಡಲಾಗುತ್ತಿದೆ. ಈ ಮೊಬೈಲ್ ಸಂಖ್ಯೆಯಿಂದ ಬರುವ ಕರೆ ಅಥವಾ ಸಂದೇಶಕ್ಕೆ ಪ್ರತಿಕ್ರಿಯೆ ನೀಡಬೇಡಿ ಎಂದು ಕೇಳಿಕೊಂಡಿದ್ದಾರೆ.

ಏನೇ ವಿಷಯವಿದ್ದರೂ ನನ್ನದೊಂದಿಗೆ ಮಾತಾಡಿ, ಮೋಸ ಹೋಗಬೇಡಿ. ನನ್ನ ಹೆಸರಿನಲ್ಲಿ ಕರೆ ಮತ್ತು ಸಂದೇಶ ಕಳುಹಿಸುವವರು ಸೈಬರ್ ಅಪರಾಧಿಗಳು, ಅವರಿಗೆ ಕಂಡಿತಾ ಶಿಕ್ಷೆ ಇದ್ದೇ ಇರುತ್ತದೆ. ಅವರ ವಿರುದ್ಧ ಸೂಕ್ತ ಕ್ರಮ ತಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತೂಕದ ಬಗ್ಗೆ ಹಾಸ್ಯ ಮಾಡಿದ ಪತ್ರಕರ್ತನಿಗೆ ಮಾತಿನೇಟು ನೀಡಿದ ತಮಿಳು ನಟಿ ಗೌರಿ ಕಿಶನ್