Select Your Language

Notifications

webdunia
webdunia
webdunia
webdunia

ಕಾಂತಾರ ಚಾಪ್ಟರ್‌ 1ರಲ್ಲಿ ರಿಷಭ್‌ ಶೆಟ್ಟಿಗೆ ಜೋಡಿಯಾಗಿ ರುಕ್ಮಿಣಿ: ಅಕ್ಟೋಬರ್‌ 2ರಂದು ಸಿನಿಮಾ ತೆರೆಗೆ

Kantara Chapter 1, Director Rishabh Shetty, Actress Rukmini Vasanth

Sampriya

ಬೆಂಗಳೂರು , ಶುಕ್ರವಾರ, 8 ಆಗಸ್ಟ್ 2025 (11:51 IST)
Photo Credit X
ಬೆಂಗಳೂರು: ರಿಷಭ್‌ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಾಪ್ಟರ್‌ 1 ಅಕ್ಟೋಬರ್‌ 2ರಂದು ಬಿಡುಗಡೆಯಾಗಲಿದೆ. ಈ ಮಧ್ಯೆ ಚಿತ್ರತಂಡವು ಚಿತ್ರದ ಕನಕವತಿ ಪಾತ್ರವನ್ನು ಪರಿಚಯಿಸಿದೆ. 

ಕನಕವತಿ ಪಾತ್ರಕ್ಕೆ ನಟಿ ರುಕ್ಮಿಣಿ ವಸಂತ್ ಜೀವ ತುಂಬಿದ್ದಾರೆ. ರಿಷಭ್‌ ಶೆಟ್ಟಿ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನವಾದ ಇಂದು ಚಿತ್ರತಂಡವು ಅವರ ಮೊದಲ ನೋಟವನ್ನು ಅನಾವರಣಗೊಳಿಸಿದೆ.  ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಹಂಚಿಕೊಂಡಿದೆ.  

ಚಿತ್ರವು ಕನ್ನಡ, ಹಿಂದಿ, ತೆಲುಗು, ಮಲಯಾಳ, ತಮಿಳು, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅಕ್ಟೋಬರ್ 2ರಂದು ತೆರೆ ಕಾಣಲಿದೆ. 3000ಕ್ಕೂ ಹೆಚ್ಚು ಜೂನಿಯರ್‌ ಕಲಾವಿದರು ಈ ಸಿನಿಮಾದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. 

ಕದಂಬರ ಆಳ್ವಿಕೆಯ ಕಾಲದಲ್ಲಿ ಹುಟ್ಟಿದ ದಂತಕಥೆಯ ಕಥಾಹಂದರ ಹೊಂದಿರುವ ಈ ಸಿನಿಮಾಗಾಗಿ ಉಡುಪಿ ಜಿಲ್ಲೆಯ ಕುಂದಾಪುರದ ಒಂದು ಹೊಸ ಲೋಕವನ್ನೇ ರಿಷಬ್‌ ಸೃಷ್ಟಿಸಿದ್ದಾರೆ. 

ಛಾಯಾಚಿತ್ರಗ್ರಾಹಕ ಅರವಿಂದ್‌ ಕಶ್ಯಪ್‌, ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್, ಪ್ರೊಡಕ್ಷನ್ ಡಿಸೈನರ್ ವಿನೇಶ್ ಬಂಗ್ಲನ್ ಇಡೀ ಸಿನಿಮಾಗೆ ಅದ್ಭುತ ದೃಶ್ಯ ಮತ್ತು ಭಾವನಾತ್ಮಕ ಸ್ಪರ್ಶ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಡೆನೂರು ಮನು ವಿರುದ್ಧದ ರೇಪ್‌ ಕೇಸ್‌ನಲ್ಲಿ ನಡೆ ಬದಲಾಯಿಸಿದ ಸಂತ್ರಸ್ತ ನಟಿ