Select Your Language

Notifications

webdunia
webdunia
webdunia
webdunia

Kantara Chpater 1: ಕೊನೆಗೂ ಕಾಂತಾರ ಚಾಪ್ಟರ್ 1 ಶೂಟಿಂಗ್ ಮುಗಿಯಿತು: video

Rishabh shetty

Krishnaveni K

ಬೆಂಗಳೂರು , ಸೋಮವಾರ, 21 ಜುಲೈ 2025 (12:03 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ರಿಷಭ್ ಶೆಟ್ಟಿಯವರ ಕಾಂತಾರ ಚಾಪ್ಟರ್ 1 ಸಿನಿಮಾ ಶೂಟಿಂಗ್ ಕೊನೆಗೂ ಮುಕ್ತಾಯವಾಗಿದೆ. ಈ ಬಗ್ಗೆ ಸ್ವತಃ ಹೊಂಬಾಳೆ ಫಿಲಂಸ್ ಪ್ರಕಟಣೆ ನೀಡಿದೆ.

ತಮ್ಮ ಊರಿನಲ್ಲೇ ವಿಶೇಷ ಸೆಟ್ ಹಾಕಿ ರಿಷಭ್ ಶೆಟ್ಟಿ ಕಾಂತಾರ ಚಾಪ್ಟರ್ 1 ಸಿನಿಮಾ ಶೂಟಿಂಗ್ ಮಾಡಿದ್ದರು. ಇದೀಗ ಬರೋಬ್ಬರಿ 250 ದಿನಗಳ ಶೂಟಿಂಗ್ ಮುಕ್ತಾಯವಾಗಿದೆ ಎಂದು ಹೊಂಬಾಳೆ ಫಿಲಂಸ್ ಪ್ರಕಟಣೆ ತಿಳಿಸಿದೆ.

ಈಗಾಗಲೇ ಅಕ್ಟೋಬರ್ 2 ರಂದು ಸಿನಿಮಾ ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲಂಸ್ ಘೋಷಿಸಿದೆ. ಎಲ್ಲವೂ ಅಂದುಕೊಂಡಂತೇ ಈಗ ಚಿತ್ರೀಕರಣ ಮುಗಿದಿದ್ದು ಇನ್ನು ಸದ್ಯದಲ್ಲೇ ಹಾಡುಗಳ ಬಿಡುಗಡೆಯಾಗಲಿರುವುದಾಗಿ ಸೂಚನೆ ನೀಡಲಾಗಿದೆ.

ಚಿತ್ರದ ಮೇಕಿಂಗ್ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗಿದ್ದು ಇದರಲ್ಲಿ ಚಿತ್ರ ಎಷ್ಟು ಅದ್ಧೂರಿಯಾಗಿ ತೆರೆ ಮೇಲೆ ಬರಲಿದೆ ಎನ್ನುವುದರ ಸುಳಿವು ಸಿಕ್ಕಿದೆ. ಕಾಂತಾರ ಮೊದಲ ಸಿನಿಮಾಗಿಂತಲೂ ಇದು ಇನ್ನಷ್ಟು ಅದ್ಧೂರಿಯಾಗಿರಲಿದೆ ಎಂದು ಮೇಕಿಂಗ್ ನೋಡಿದರೇ ತಿಳಿಯುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮ್ಯಾಂಚೆಸ್ಟರ್ ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ ಕೆಎಲ್ ರಾಹುಲ್