Select Your Language

Notifications

webdunia
webdunia
webdunia
webdunia

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

Kantara chapter 1

Krishnaveni K

ಬೆಂಗಳೂರು , ಸೋಮವಾರ, 7 ಜುಲೈ 2025 (10:31 IST)
ಬೆಂಗಳೂರು: ಇಂದು ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಜನ್ಮದಿನವಾಗಿದ್ದು ಅವರ ಹುಟ್ಟುಹಬ್ಬಕ್ಕೆ ಕಾಂತಾರ ಚಾಪ್ಟರ್ 1 ಸಿನಿಮಾ ತಂಡದಿಂದ ಅಭಿಮಾನಿಗಳಿಗೆ ಉಡುಗೊರೆಯೊಂದು ಸಿಕ್ಕಿದೆ.

ರಿಷಭ್ ಶೆಟ್ಟಿ ಇಂದು 41 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಕಾಂತಾರ ಸಿನಿಮಾ ಮೂಲಕ ರಿಷಭ್ ಜನಪ್ರಿಯತೆ ಹೆಚ್ಚಾಗಿದೆ. ಇದೀಗ ಬಹುಭಾಷೆಗಳಲ್ಲಿ ರಿಷಭ್ ನಟಿಸುತ್ತಿದ್ದಾರೆ. ಈ ಪೈಕಿ ಅವರ ಕಾಂತಾರ ಚಾಪ್ಟರ್ 1 ಸಿನಿಮಾ ಮೊದಲು ಬಿಡುಗಡೆಯಾಗಲಿದೆ.

ಇಂದು ರಿಷಭ್ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಸಿನಿಮಾದ ಪೋಸ್ಟರ್ ನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ವೀರ ಸೇನಾನಿಯಂತೆ ಕತ್ತಿ, ಗುರಾಣಿ ಹಿಡಿದು ನಿಂತಿರುವ ರಿಷಭ್ ಲುಕ್ ಈ ಪೋಸ್ಟರ್ ನಲ್ಲಿ ನೋಡುಗರ ಕುತೂಹಲ ಹೆಚ್ಚಿಸುವಂತಿದೆ.

ಇನ್ನು, ಇದರ ಜೊತೆಗೆ ಕಾಂತಾರ ಚಾಪ್ಟರ್ 1 ಬಿಡುಗಡೆ ದಿನಾಂಕವನ್ನೂ ಹೊಂಬಾಳೆ ಫಿಲಂಸ್ ಪ್ರಕಟಿಸಿದೆ. ಇದೇ ವರ್ಷ ಅಕ್ಟೋಬರ್ 2 ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಪ್ರಕಟಿಸಿದೆ. ಇದರೊಂದಿಗೆ ಅಭಿಮಾನಿಗಳ ಖುಷಿ ಹೆಚ್ಚಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌