Select Your Language

Notifications

webdunia
webdunia
webdunia
webdunia

ಕನ್ನಡದ ತ್ಯಾಗರಾಣಿ ಆಗ್ಬಿಟ್ರಾ ರುಕ್ಮಿಣಿ ವಸಂತ್‌: ನೆಟ್ಟಿಗರು ಇಲ್ಲೊಂದು ಸಮಸ್ಯೆಯಿದೆ ಎನ್ನುತ್ತಿರುವುದೇಕೆ

Bairathi Ranagal Cinema Review

Sampriya

ಬೆಂಗಳೂರು , ಮಂಗಳವಾರ, 19 ನವೆಂಬರ್ 2024 (17:18 IST)
Photo Courtesy X
ನಟ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಅಭಿನಯದ ಭೈರತಿ ರಣಗಲ್ ಸಿನಿಮಾಗೆ ಅಭಿಮಾನಿಗಳು ನೂರಕ್ಕೆ ನೂರು ಮಾರ್ಕ್ಸ್‌ ನೀಡಿದ್ದಾರೆ. ಇನ್ನು ಕಳೆದ ವಾರ ಬಿಡುಗಡೆಯಾದ ಸಿನಿಮಾಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ಮಾತುಗಳು ವ್ಯಕ್ತವಾಗುತ್ತಿದ್ದು, ಕರ್ನಾಟಕದ ಹೊರಗೂ ದೊಡ್ಡ ಸದ್ದು ಮಾಡುತ್ತಿರುವ ಸಿನಿಮಾಗೆ ಬಾಲಿವುಡ್‌ನಿಂದಲೂ ಬೇಡಿಕೆ ಬಂದಿದೆ ಎನ್ನಲಾಗಿದೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ನಾಯಕಿ ರುಕ್ಮಿಣಿ ವಸಂತ್ ಬಗ್ಗೆ ಚರ್ಚೆ ಜೋರಾಗಿದೆ. ಪ್ರತಿಭಾನ್ವಿತ ನಟಿಯಾಗಿರುವ ರುಕ್ಮಿಣಿ ವಸಂತ್‌ ಸ್ಯಾಂಡಲ್‌ವುಡ್‌ನ ತ್ಯಾಗರಾಣಿಯಾಗಿದ್ದಾರೆ. ಕನ್ನಡದ ಸ್ಟಾರ್ ನಟರ ಜತೆ ಸಾಲು ಸಾಲು ಸಿನಿಮಾಗಳ ಅಭಿನಯಿಸಿದ ರುಕ್ಮಿಣಿ ವಸಂತ್‌ಗೆ ಹೊಸ ಬಿರುದು ಸಿಕ್ಕಿದೆ.

ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ರುಕ್ಮಿಣಿ ಪಾತ್ರಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಯಾಕೆಂದರೆ ನಟಿಸಿದ ಎಲ್ಲ ಸಿನಿಮಾಗಳಲ್ಲು ಹೀರೋಯಿನ್‌ಗೆ ಹೀರೋ ಸಿಗಲ್ಲ.

ಟ್ರೋಲ್ ಆಗುತ್ತಿರುವ ಪೋಸ್ಟ್‌ನಲ್ಲಿ ಸಪ್ತಾಸಾಗರ ದಾಚೆ ಎಲ್ಲೋ ಅಲ್ಲಿ ರಕ್ಷಿತ್‌ ಶೆಟ್ಟಿಗೆರ ಸಿಗಲ್ಲ, ಬಘೀರ ಅಲ್ಲಿ ಶ್ರೀ ಮುರುಳಿಗೆ ಸಿಗಲ್ಲ. ಬಾನದಾರಿಯಲ್ಲಿ ಗಣೇಶ್‌ಗೆ ಸಿಗಲ್ಲ, ಭೈರತಿ ರಣಗಲ್‌ನಲ್ಲಿ ಶಿವಣ್ಣಗೆ ಸಿಗಲ್ಲ. ಇದೆ ಇಲ್ಲೊಂದು ಸಮಸ್ಯೆಯಿದೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

BigBoss Season 11: ಕ್ಲಾರಿಟಿ ವಿಚಾರಕ್ಕೆ ಹನುಮಂತುಗೆ ಟಾಂಗ್ ಕೊಟ್ಟ ಭವ್ಯಾ