Select Your Language

Notifications

webdunia
webdunia
webdunia
webdunia

ಕೊಟ್ಟ ಮಾತು ಉಳಿಸಲು ಅನಾರೋಗ್ಯವನ್ನೂ ಲೆಕ್ಕಿಸದೇ ಶಿವಣ್ಣ ಏನು ಮಾಡ್ತಿದ್ದಾರೆ ಗೊತ್ತಾ

Hatric Hero Shivrajkumar

Sampriya

ಬೆಂಗಳೂರು , ಗುರುವಾರ, 14 ನವೆಂಬರ್ 2024 (19:12 IST)
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಅವರು ಈಚೆಗೆ ತಮ್ಮ ಅನಾರೋಗ್ಯ ವಿಚಾರವನ್ನು ಮುಕ್ತವಾಗಿ ಹೇಳಿಕೊಂಡರು. ಆದರೆ ತಾನು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇನೆ.

ಮುಂದಿನ ತಿಂಗಳು ಚಿಕಿತ್ಸೆಗಾಗಿ ರೆಸ್ಟ್ ಪಡೆಯುತ್ತೇನೆ. ಇದೀಗ ನಿರ್ಮಾಪಕರಿಗೆ ಕೊಟ್ಟ ಮಾತನ್ನು ಉಳಿಸಲು ಇದೀಗ ಅನಾರೋಗ್ಯವನ್ನು ಲೆಕ್ಕಿಸದೆ ರಿಯಾಲಿಟಿ ಶೋನ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಪತ್ನಿ ಗೀತಾ ಜತೆ ಶಿವರಾಜ್‌ಕುಮಾರ್‌ ಅವರು ಡಿಕೆಡಿ ಫೈನಲ್‌ ಶೂಟಿಂಗ್‌ನಲ್ಲಿ ಪಾಲ್ಗೊಂಡರು. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶಿವಣ್ಣ ಅವರು ಇದೀಗ ಭೈರತಿ ರಣಗಲ್ ಸಿನಿಮಾ ರಿಲೀಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದು ಕಡೆ ತಮಿಳು ಸಿನಿಮಾ ಇಂಡಸ್ಟ್ರಿಯಿಂದನೂ ಆಫರ್‌ ಬಂದಿರುವುದಾಗಿ ಹೇಳಿಕೊಂಡಿದ್ದಾರೆ.

ಜೀ ಕನ್ನಡದ ಡಿಕೆಡಿ ಶೋನಲ್ಲಿ ಜಡ್ಜ್‌ ಆಗಿರುವ ಶಿವರಾಜ್‌ಕುಮಾರ್‌ ಅವರು ತಪ್ಪದೆಯೇ ಶೋನಲ್ಲಿ ಭಾಗವಹಿಸಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಕೊಟ್ಟ ಮಾತಿನಂತೆ ಶೋನಲ್ಲಿ ಭಾಗವಹಿಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಸುದ್ದಿ ಬೆನ್ನಲ್ಲೇ ಕನಸಿನ ಮನೆಗೆ ಕಾಲಿಟ್ಟ ಸೋನು ಶ್ರೀನಿವಾಸ ಗೌಡ