ಬೆಂಗಳೂರು: ಹೃದಯಾಘಾತವಾಗಿ ನಗರದ ಎಲೆಕ್ಟ್ರಾನಿಕ್ ಸಿಟಿಯ ನಾರಾಯಣ ಹೃದಯಾಲಯದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಹೋದರ ಸತ್ಯನಾರಾಯಣ ರಾವ್ ಅವರನ್ನು ನೋಡಲು ರಜನಿಕಾಂತ್ ಅವರು ಆಗಮಿಸಿದ್ದಾರೆ.
ಸತ್ಯನಾರಾಯಣ ರಾವ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೋ ಇಲ್ಲವೋ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ.
ಸದ್ಯ ಚಿಕಿತ್ಸೆ ಮುಂದುವರಿದಿದೆ. ಬೆಂಗಳೂರಿನ ಹೊಸಕೆರೆ ಹಳ್ಳಿಯ ನಂದಿ ಕಾರಿಡಾರ್ ನಿವಾಸಿಯಾಗಿರುವ ಸತ್ಯನಾರಾಯಣ ರಾವ್ ಗಾಯಕ್ವಾಡ್ ಅವರಿಗೆ 84 ವರ್ಷ ವಯಸ್ಸಾಗಿತ್ತು.
ಸ್ವತಃ ರಜನಿಕಾಂತ್ ಅವರೇ ತಮ್ಮ ಅಣ್ಣನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಇಂದು ಬೆಳಿಗ್ಗೆ ಬೆಂಗಳೂರಿಗೆ ಬಂದು ಸ್ವತಃ ತಾವೇ ಅಣ್ಣ ಸತ್ಯನಾರಾಯಣ ಅವರನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದಾರೆ ನಟ ರಜನಿಕಾಂತ್.
ಈ ಹಿಂದೆಯೂ ಅವರಿಗೆ ಹೃದಯಾಘಾತವಾಗಿತ್ತು. ಚಿಕಿತ್ಸೆ ಪಡೆದು ಮತ್ತೆ ನಾರ್ಮಲ್ ಆಗಿದ್ದರು ಎಂಬ ಮಾಹಿತಿ ಇದೆ. ಆದರೆ, ಈಗ ವಯೋಸಹಜ ಅನಾರೋಗ್ಯ ಕೂಡ ಅವರನ್ನು ಬಾಧಿಸುತ್ತಿದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ..