ಬೆಂಗಳೂರು: ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿ, ನಟ ಉಗ್ರಂ ಮಂಜು ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದೀಗ ನಟ ಗುಟ್ಟಾಗಿ, ತಮ್ಮ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಉಗ್ರಂ ಮಂಜು ಅವರು ಸಂಧ್ಯಾ ಅವರನ್ನು ವಿವಾಹವಾಗಲಿದ್ದು, ಇಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ಆತ್ಮೀಯರು, ಸ್ನೇಹಿತರ ಸಮ್ಮುಖದಲ್ಲಿ ನೆರವೇರಿದೆ. ಪರಸ್ಪರ ಉಂಗುರ ಬದಲಾಯಿಸಿಕೊಳ್ಳುತ್ತಿರುವ ಚಿತ್ರಗಳನ್ನು ಉಗ್ರಂ ಮಂಜು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಬರೆದುಕೊಂಡಿದ್ದಾರೆ.
ಹೊಸ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬಿಗ್‌ಬಾಸ್ ಮನೆಯಲ್ಲಿರುವಾಗಲೂ ಮಂಜು ಅವರ ಪೋಷಕರು ಮದುವೆಯಾಗಬೇಕೆಂಬ ಬೇಡಿಕೆಯನ್ನು ವ್ಯಕ್ತಪಡಿಸಿದ್ದರು. ಆದರೆ ಮಂಜು ನೋಡುವಾ ಎಂದು ನಿರಾಸಕ್ತಿಯನ್ನು ತೋರಿದ್ದರು.
ಇನ್ನೂ ಬಿಗ್‌ಬಾಸ್‌ನಿಂದ ಹೊರಬಂದ್ಮೇಲೆ ಬದಲಾದ ಉಗ್ರಂ ಮಂಜು ಇದೀಗ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡು, ದಾಂಪತ್ಯ ಜೀವನಕ್ಕೆ ಸಜ್ಜಾಗಿದ್ದಾರೆ.