ಬೆಂಗಳೂರು:  ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿ ಗೋಲ್ಡ್ ಸುರೇಶ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿತ್ತು. ಇದೀಗ ಈ ಸಂಬಂಧ ಅವರು ಪ್ರತಿಕ್ರಿಯಿಸಿದ್ದಾರೆ. 
									
			
			 
 			
 
 			
					
			        							
								
																	ಕೇಬಲ್ ಚಾನೆಲ್ ಸೆಟ್‌ಅಪ್ ಮಾಡಿಕೊಡುವುದಾಗಿ ಹೇಳಿ ವಂಚನೆ ಮಾಡಿದ್ದಾರೆಂದು ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬುವವರು ಸುರೇಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. 
									
										
								
																	ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ನನ್ನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. 2018ರಲ್ಲಿ ಸ್ನೇಹಿತನ ಮೂಲಕ ಪರಿಚಯವಾದ ವ್ಯಕ್ತಿಗೆ ನಾನು ಕೆಲಸ ಮಾಡಿಕೊಟ್ಟಿದ್ದೇನೆ.  ನಾನು ಯಾರಿಗೂ ಯಾವುದೇ ಹಣ ಕೊಡಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.
									
											
							                     
							
							
			        							
								
																	ಇದು ನಡೆದಿರುವುದು 2018ರಲ್ಲಿ. ಈಗ್ಯಾಕೆ ನನ್ನ ವಿರುದ್ಧ ಬಂದ್ರು ಗೊತ್ತಿಲ್ಲ. ಈ ಸಂಬಂಧ ಅವರ ಬಳಿ ಸೂಕ್ತ ದಾಖಲೆಗಳು ಇದ್ರೆ ದೂರು ನೀಡಲಿ. ಇದನ್ನು ನೋಡಿದಾಗ ಹಣಕ್ಕಾಗಿ ಈ ಕೆಲಸ ಮಾಡಿದ್ದಾರೆ ಎಂದು ಗೊತ್ತಾಗುತ್ತದೆ. 
									
			                     
							
							
			        							
								
																	ಹಣ ನೀಡದಿದ್ದರೆ ಮಾಧ್ಯಮದ ಮುಂದೆ ಹೋಗುವುದಾಗಿ ಬೆದರಿಕೆ ಹಾಕುತ್ತಾರೆ. ನಾನು ಇದಕ್ಕೆಲ್ಲ ತಲೆಬಾಗುವದೇ ಇಲ್ಲ. ನನ್ನ ಹೆಸರನ್ನು ಹಾಳು ಮಾಡುವ ಉದ್ದೇಶ ಬಿಟ್ರೆ, ಬೇರೆನಿಲ್ಲ ಎಂದರು.