ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಹಾನಟಿ ಸೀಸನ್ 2ರ ಕಿರೀಟವನ್ನು ಮಂಗಳೂರಿನ ವಂಶಿ ಮುಡಿಗೇರಿಸಿಕೊಂಡಿದ್ದಾರೆ. ತಮ್ಮ ಅಮೋಘ ಅಭಿನಯದ ಮೂಲಕ ಎಲ್ಲರ ಮನಗೆದ್ದ ವಂಶಿ ಇದೀಗ ಸೀಸನ್ 2ರ ಮಹಾನಟಿಯಾಗಿ ಹೊರ ಹೊಮ್ಮಿದ್ದಾರೆ.
ಮಾನ್ಯ ರಮೇಶ್, ವರ್ಷಾ ಡಿಗ್ರಜೆ, ವಂಶಿ ರತ್ನಕುಮಾರ್, ಶ್ರೀಯ ಅಗಮ್ಯ ಹಾಗೂ ಭೂಮಿಕ ತಮ್ಮೇಗೌಡ ಅವರು ಟಾಫ್ 5 ಫೈನಲಿಸ್ಟ್‌ಗಳಾಗಿದ್ದರು. ಈ ಪ್ರತಿಭೆಗಳ ಮಧ್ಯೆ ವಂಶಿ ವಿಜೇತರಾಗಿ, ಫಸ್ಟ್ ರನ್ನರ್ ಅಪ್ ಆಗಿ ವರ್ಷಾ ಡಿಗ್ರಜೆ ಹೊರ ಹೊಮ್ಮಿದ್ದಾರೆ. ಶ್ರೀಯ ಅಗಮ್ಯ ಎರಡನೇ ರನ್ನರ್ ಅಪ್ ಆಗಿದ್ದಾರೆ.
ಇನ್ನೂ ವಿಜೇತ ವಂಶಿ ರತ್ನಾಕರ್‌ಗೆ ₹15 ಲಕ್ಷ ಮೌಲ್ಯದ ಚಿನ್ನದ ಕಿರೀಟ ನೀಡಲಾಗಿದೆ. ಮೊದಲ ರನ್ನರ್ ಅಪ್ ಆಗಿರುವ ಬೆಳಗಾವಿಯ ವರ್ಷಾ ಡಿಗ್ರಜೆ ಅವರಿಗೆ ₹10 ಲಕ್ಷ ನಗದು ಬಹುಮಾನ ನೀಡಲಾಗಿದೆ. ಎರಡನೇ ರನ್ನರ್ ಅಪ್ ಆಗಿರುವ ಮೈಸೂರಿನ ಶ್ರೀಯ ಅಗಮ್ಯಗೆ ₹7 ಲಕ್ಷ ನಗದು ಬಹುಮಾನ ನೀಡಲಾಗಿದೆ.
ಎರಡನೇ ಸೀಸನ್‌ನ ಜಡ್ಜ್‌ಗಳಾಗಿ ರಮೇಶ್ ಅರವಿಂದ್, ನಿಶ್ವಿಕಾ ನಾಯ್ಡು, ತರುಣ್ ಸುಧೀರ್ ಅವರು ತೀರ್ಪುಗಾರರ ಸ್ಥಾನದಲ್ಲಿದ್ದರು.