ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಇದೀಗ ಶಾಕಿಂಗ್ ನ್ಯೂಸ್ ಕಾದಿದೆ.
ಕೊಲೆ ಪ್ರಕರಣದ ತನಿಖೆ ಸಂದರ್ಭ ದರ್ಶನ್ ನಿವಾಸದಲ್ಲಿ ಪತ್ತೆಯಾಗಿರುವ ₹82 ಲಕ್ಷ ಹಣ ಆದಾಯ ತೆರಿಗೆ ಇಲಾಖೆಯಲ್ಲೇ ಇರಲಿ ಎಂದು 57ನೇ ಸಿಸಿಎಚ್ ಕೋರ್ಟ್ ಆದೇಶಿಸಿದೆ.
ತನಿಖೆ ಸಂದರ್ಭದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್ ಮನೆ ಮತ್ತು ಪ್ರದೋಷ್ ಮನೆಯಲ್ಲಿ ಹಣ ವಶಕ್ಕೆ ಪಡೆದು ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆ ಮಾಡಿದ್ದರು.
ತನಿಖೆ ನಡೆಸಿದ ಐಟಿ ಇನ್ನೂ ಸ್ಪಷ್ಟವಾದ ಮಾಹಿತಿ ನೀಡಿರಲಿಲ್ಲ. ಈ ಸಂದರ್ಭದಲ್ಲಿ ದರ್ಶನ್ ಹಣ ವಾಪಾಸ್ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು.
ಇನ್ನೂ ದರ್ಶನ್ ಅರ್ಜಿಗೆ ಆಕ್ಷೇಪಣೆ ಎತ್ತಿದ ಐಟಿ ದರ್ಶನ್ ಇದೂವರೆಗೂ ಸ್ಪಷ್ಟ ಮಾಹಿತಿ ನೀಡಿರಲಿಲ್ಲ. ಹೀಗಾಗಿ ತನಿಖೆ ಮುಂದುವರೆಸಬೇಕಾಗಿದೆ ಎಂದಿತ್ತು. ವಾದ– ಪ್ರತಿವಾದ ಆಲಿಸಿದ ನ್ಯಾಯಾಲಯ 82 ಲಕ್ಷ ಹಣ ಐಟಿ ಬಳಿಯಲ್ಲೇ ಇರಲಿ, ತನಿಖೆ ಇನ್ನೂ ಮುಂದುವರೆಯಬೇಕಿದೆ ಎಂದು ಹೇಳಿದೆ.