ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರು ನೂರು ದಿನಗಳನ್ನು ಜೈಲಿನಲ್ಲಿ ಪೂರೈಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿ ಜಾಮೀನು ಮೂಲಕ ಬಿಡುಗಡೆಯಾಗಿದ್ದ ದರ್ಶನ್ ಮತ್ತೇ ಜೈಲು ಸೇರಿದ್ದರು. ಇದೀಗ ದರ್ಶನ್ ಪರಪ್ಪನ ಅಗ್ರಹಾರ ಸೇರಿ 105 ದಿನಗಳನ್ನು ಪೂರೈಸಿದ್ದಾರೆ.
ಆಗಸ್ಟ್ 15ರಂದು ಜಾಮೀನು ರದ್ದಾದ ಹಿನ್ನೆಲೆ ಅಂದೇ ದರ್ಶನ್‌ರನ್ನು ಪೊಲೀಸರು ಮತ್ತೇ ಅರೆಸ್ಟ್ ಮಾಡಿದ್ದರು. ಇನ್ನೂ ದರ್ಶನ್ ಪರಪ್ಪನ ಅಗ್ರಹಾರ ಸೇರಿದ್ಮೇಲೆ ಕನಿಷ್ಠ ಮೂಲ ಸೌಕರ್ಯ ನೀಡುತ್ತಿಲ್ಲವೆಂದು ಆರೋಪ ಮಾಡಿದ್ದರು.
ಈ ಹಿಂದೆ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿ ಗ್ಯಾಂಗ್ ಜತೆ ಕಾಫಿ ಕುಡಿಯುತ್ತಾ, ಸಿಗರೇಟ್ ಸೇವಿಸುತ್ತಿರುವ ಫೋಟೋ ಬಿಡುಗಡೆಯಾಗಿ ಕೆಲವು ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗಿತ್ತು. ನಂತರ ಜಾಮೀನು ಪಡೆದಿದ್ದರೂ, ಸುಪ್ರೀಂ ಕೋರ್ಟ್ ಜಾಮೀನು ರದ್ದುಪಡಿಸಿದ ಬಳಿಕ ಅವರನ್ನು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಯಿತು.
ಇದೀಗ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ಬೇರೆ ಕೈದಿಗಳಂತೆಯೇ ದರ್ಶನ್‌ರನ್ನು ವಿಚಾರಿಸಲಾಗುತ್ತಿದೆ. ಪ್ರಾರಂಭದಲ್ಲಿ ದರ್ಶನ್ ತಲೆ ದಿಂಬು, ಹೊದಿಕೆಯನ್ನು ನೀಡಲಾಗಿಲ್ಲ. ಈ ಸಂಬಂಧ ಕೋರ್ಟ್ ಮುಖಾಂತರ ಅದನ್ನು ಪಡೆದುಕೊಂಡರು. ಆದರೆ ಸಾಮಾನ್ಯ ಕೈದಿಯಂತೆ ಇದೀಗ ದರ್ಶನ್ ಕಾಲ ಕಳೆಯುತ್ತಿದ್ದಾರೆ.