ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ, ದರ್ಶನ್ ಆಪ್ತ ಪ್ರದೋಷ್‌ಗೆ 57ನೇ ಸಿಸಿಎಚ್ ಕೋರ್ಟ್‌ಮತ್ತೆ 5 ದಿನಗಳ ಕಾಲ ಜಾಮೀನು ನೀಡಿ ಆದೇಶ ಹೊರಡಿಸಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಪ್ರದೋಷ್ ಜೈಲು ಸೇರಿದಾಗ ತಂದೆಗೆ ಅನಾರೋಗ್ಯ ಕಾಡಿತ್ತು. ಈ ಕಾರಣಕ್ಕೆಯೇ ಅವರು ತನ್ನನ್ನು ಪರಪ್ಪನ ಅಗ್ರಹಾರದಲ್ಲಿ ಇರಿಸುವಂತೆ ಕೇಳಿಕೊಂಡಿದ್ದರು.
ಅವರ ತಂದೆ ಅಕ್ಟೋಬರ್‌ನಲ್ಲಿ ನಿಧನರಾಗಿದ್ದರು. ಈ ಹಿನ್ನೆಲೆ ಅಂತ್ಯ ಸಂಸ್ಕಾರ ಹಾಗೂ ಇತರೆ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಕೋರ್ಟ್ 20 ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.
ಇದೀಗ ಪ್ರದೋಷ್ ಪರ ವಕೀಲರು 57ನೇ ಸಿಸಿಹೆಚ್ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ 5 ದಿನಗಳ ಕಾಲ ಜಾಮೀನು ಮಂಜೂರು ಮಾಡಿದೆ.
ನವೆಂಬರ್ 18 ರಿಂದ ನ.22ರ ವರೆಗೆ ಜಾಮೀನು ಮಂಜೂರು ಮಾಡಿದ್ದು, ಅವಧಿ ಮುಗಿದ ಬಳಿಕ ಪರಪ್ಪನ ಅಗ್ರಹಾರಕ್ಕೆ ಮರಳುವಂತೆ ಸೂಚಿಸಿದೆ.