Select Your Language

Notifications

webdunia
webdunia
webdunia
webdunia

ದರ್ಶನ್‌ಗೆ ಜೀವಾವಧಿ ಕೊಟ್ರು ಓಕೆ, ದರ್ಶನ್ ಪರ ವಕೀಲರ ವಾದ ಹೀಗಿತ್ತು

Actor Darshan Case

Sampriya

ಬೆಂಗಳೂರು , ಶನಿವಾರ, 25 ಅಕ್ಟೋಬರ್ 2025 (20:41 IST)
Photo Credit X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಹಾಸಿಗೆ, ದಿಂಬು ಇನ್ನೂ ಸಿಕ್ಕಿಲ್ಲ. ಈ ಸಂಬಂಧ ಇಂದು ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನಡೆಯಿತು. 

ವಿಚಾರಣೆಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ವರದಿ ಮೇಲೆ ದರ್ಶನ್ ಪರ ವಕೀಲ ಸುನೀಲ್ ವಾದ ಮಂಡನೆ ಮಾಡಿದರು.

ಜೈಲು ಅಧಿಕಾರಿಗಳು ಕಾನೂನು ಸೇವಾ ಪ್ರಾಧಿಕಾರದ ಸದಸ್ಯರನ್ನ ಮೀಸ್‌ಲೀಡ್ ಮಾಡಿದ್ದಾರೆ. ಆದೇಶದಲ್ಲಿ ಎಲ್ಲೂ ಜೈಲು ಅಧಿಕಾರಿಗಳಿಂದ ಮಾಹಿತಿ ಕೇಳಿ ಅಂತೇಳಿಲ್ಲ. ಗುಬ್ಬಚ್ಚಿ ಸೀನಾ ಬರ್ತ್‌ಡೆಯನ್ನು ಜೈಲಿನಲ್ಲಿ ಆಚರಣೆ ಮಾಡಿಕೊಂಡಿದ್ದಾರೆ. ಒಬ್ಬರಿಗೂ ಒಂದು ಕಾನೂನು ಮತ್ತೊಬ್ಬರಿಗೆ ಮತ್ತೊಂದು ಕಾನೂನು ಎಂದು ಪ್ರಶ್ನೆ ಮಾಡಿದ್ದಾರೆ. 


ಅದಲ್ಲದೆ ದರ್ಶನ್‌ರನ್ನು ಕ್ವಾರಂಟೈನ್ ಸೆಲ್‌ನಿಂದ ಮೈನ್ ಸೆಲ್‌ಗೆ ಶಿಫ್ಟ್ ಮಾಡಿ, ನಾವು ಟ್ರಯಲ್‌ಗೆ ಸಿದ್ಧರಿದ್ದೇವೆ. ಒಂದೇ ದಿನದಲ್ಲಿ ಟ್ರಯಲ್ ನಡೆದು ಜೀವಾವಧಿ ಶಿಕ್ಷೆ ಬೇಕಿದ್ರೂ ವಿಧಿಸಿ ಒಕೆ ಎಂದು ವಾದಿಸಿದರು. 

ದರ್ಶನ್ ಪರ ವಕೀಲರ ವಾದಕ್ಕೆ ಪ್ರತಿವಾದ ಮಾಡಿದ ಎಸ್‌ಪಿಪಿ ಸಚಿನ್, ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿ ಜೈಲಿನ ಅಧಿಕಾರಿಗಳು, ಆರೋಪಿಗಳ ಬಳಿ ಎರಡು ಕಡೆ ಮಾಹಿತಿ ಪಡೆದು ವರದಿ ಸಲ್ಲಿಕೆ ಮಾಡಿದ್ದಾರೆ. 

ಆ ವರದಿಯಲ್ಲಿ ದರ್ಶನ್‌ಗೆ ಪಂಗಸ್ ಇನ್ಪೆಕ್ಷನ್ ಆಗಿಲ್ಲ. ಕಾಲು ಒಡೆದಿದೆ ಅಷ್ಟೆ. ಅದನ್ನೇ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಇನ್ನೂ ಭದ್ರತೆ ವಿಚಾರಕ್ಕೆ ಬಂದರೆ, ಮೊನ್ನೆ ಕೋರ್ಟ್ ಆವರಣದಲ್ಲೇ ಆರೋಪಿಯೊಬ್ಬ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದರ್ಶನ್ ಒಬ್ಬ ನಟನಾಗಿರುವ ಕಾರಣ, ಹೈಪ್ರೊಫೈಲ್ ಕೇಸ್ ಇದಾಗಿದೆ. ಫ್ಯಾನ್ಸ್ ಫಾಲೋ ಇದೆ. ಜೈಲಿನ ನಿಯಮಾವಳಿಗಳ ಪ್ರಕಾರವೇ ನಡೀಬೇಕು ಎಂದು ವಾದಿಸಿದರು. 

ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಇದೇ ಅ.29ಕ್ಕೆ ಹಾಸಿಗೆ ದಿಂಬಿನ ಅರ್ಜಿಯ ವಿಚಾರಣೆಯನ್ನ ಮುಂದೂಡಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಗೆಳತಿಯ ಮುಖದಲ್ಲಿ ಸದಾ ನಗುವನ್ನು ಬಯಸಿದ ನಟ ಅರ್ಜುನ್ ಕಪೂರ್