ನಟ ಶಿವರಾಜ್‌ಕುಮಾರ್ ಹಾಗೂ ದರ್ಶನ್ ಪುತ್ರ ವಿನೀಶ್ ಇಬ್ಬರು ಮುಖಾಮುಖಿಯಾದ ವೇಳೆ ಇಬ್ಬರು ಮಾತುಕತೆ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ವಿಡಿಯೋದಲ್ಲಿ ವಿನೀಶ್ ಕೈಹಿಡಿದು ಉಪಚರಿಸಿದ ಶಿವರಾಜ್‌ಕುಮಾರ್, ಎಷ್ಟನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದೀಯಾ ಎಂದು ಕೇಳಿದ್ದಾರೆ. ಅದಕ್ಕೆ ಪಿಯುಸಿಯಲ್ಲಿದ್ದೇನೆಂದ ವಿನೀಶ್, ಹೇಗಿದ್ದೀರಿ ಅಂಕಲ್ ಎಂದು ಶಿವಣ್ಣನನ್ನು ಉಪಚರಿಸಿದ್ದಾನೆ. ಚೆನ್ನಾಗಿದ್ದೇನೆ, ನೀನು ಹೇಗಿದ್ದೀಯಾ ಎಂದು ಶಿವರಾಜ್‌ಕುಮಾರ್ ಕೇಳಿದ್ದಾರೆ.
ಆರಾಮಾಗಿದ್ದೇನೆ ಎಂದು ಹೇಳಿ, ನಗು ಬೀರಿದ್ದಾನೆ. ನಂತರ ಇಬ್ಬರು ಅಲ್ಲಿಂದ್ದ ಹೊರಡಿದ್ದಾರೆ. ಈ ವಿಡಿಯೋ ತುಂಬಾನೇ ವೈರಲ್ ಆಗಿದೆ.
ಕುಂಬಳಗೋಡುವಿನ ಬಿಜಿಎಸ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಶಿವಣ್ಣ ನಟನೆಯ ಡ್ಯಾಡ್ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಗ್ರೌಂಡ್‌ಗೆ ವಿನೀಶ್ ಬಂದಿದ್ದನ್ನು.
ಶಿವರಾಜ್‌ಕುಮಾರ್ ಸರಳತೆ, ವಿನೀಶ್ ಮುಗ್ದತೆಗೆ ಎಲ್ಲರ ಮನಸ್ಸು ಗೆದ್ದಿದೆ.