ಬೆಂಗಳೂರು: ಸಿನಿಮಾದಲ್ಲಿ ನಟಿಸುವ ನಾಯಕರ ನಡೆ, ನಿಜಜೀವದಲ್ಲೂ ಅದೇ ರೀತಿ ಇರಬೇಕು ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ದರ್ಶನ್‌ಗೆ ಬುದ್ದಿ ಹೇಳಿದ್ದಾರೆ.
ಮೈಸೂರಿನ ಘಟಿಕೋತ್ಸವ ಭವನದಲ್ಲಿ ಹೇಳಿಕೆ ನೀಡಿದ ಅವರು, ಸಮಾಜ ನಿಮ್ಮನ್ನು ಫಾಲೋ ಮಾಡುವುದರಿಂದ ನಟನೆ ಮಾಡುವುದು ಬೇರೆ, ನಿಜಜೀವನ ಬೇರೆ ಅಂದ ಹಾಗಿರಬಾರದು. ನಾಯಕನ ನಡೆ ನಿಜಜೀವನದಲ್ಲೂ ಇರಬೇಕೆಂದು ಡಾ.ರಾಜ್‌ಕುಮಾರ್ ಅವರ ಜೀವನ ಉತ್ತಮ ಮಾದರಿ ಎಂದ ಹೇಳಿದರು. ಈ ಮೂಲಕ ಸಿಎಂ ಪರೋಕ್ಷವಾಗಿ ದರ್ಶನ್‌ಗೆ ಈ ಬುದ್ದಿ ಮಾತನ್ನು ಹೇಳಿದ್ದಾರೆ.
ಸಿನಿಮಾದಿಂದ ಸಮಾಜದಲ್ಲಿ ಸಾಕಷ್ಟು ಪರಿವರ್ತನೆಯಾಗಿರುವುದನ್ನು ನಾವು ನೋಡಿದ್ದೇವೆ. ಹೀರೋಗಳ ರೀತಿಯಲ್ಲಿ ನಿಜ ಜೀವದನಲ್ಲೂ ಬದುಕು ಸಾಗಿಸಿದವರು ಸಾಕಷ್ಟು ಮಂದಿಯಿದ್ದಾರೆ. ಇದೀಗ ಸಿನಿಮಾ ನೋಡಿ ಸಮಾಜ ಬದಲಾಗಿದ್ದು ಕಡಿಮೆ.
ಡಾ.ರಾಜ್‌ಕುಮಾರ್ ಅವರು ಇಲ್ಲದಿದ್ದರೂ ಇಂದಿಗೂ ಕೂಡಾ ಅವರನ್ನು ಸ್ಮರಿಸುತ್ತೇವೆ, ಯಾಕೆಂದರೆ ಅವರು ಬದುಕಿದ ರೀತಿ ಎಂದರು.