ಮೈಸೂರು: ರಾಜ್ಯ ರಾಜಕಾರಣ ಬೆಳವಣಿಗೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡದೇ ಬೇರೆ ಯಾರೇ ಏನೇ ಮಾತನಾಡಿದರೂ ಅದಕ್ಕೆ ಕಿಮ್ಮತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಇಲ್ಲಿ ಸೋಮವಾರ ಹೇಳಿದರು.
ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಬಿಹಾರ ಮೂಲದ ಮುಖಂಡರು ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ ಗರಂ ಆದ ಸಿದ್ದು, ಮಾಧ್ಯಮದವರಿಗೆ ಇದು ಬಿಟ್ಟು ಬೇರೆ ವಿಷಯವಿಲ್ಲವೇ ಎಂದು ಮರು ಪ್ರಶ್ನೆ ಮಾಡಿದರು.
ಜನ ಏನ್ ಬೇಕಾದ್ರೂ ಮಾತನಾಡುತ್ತಾರೆ. ಹೈಕಮಾಂಡ್ ಹೇಳಬೇಕಲ್ಲವೇ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ನಮ್ಮ ಹೈಕಮಾಂಡ್. ಅವರೇನಾದರೂ ಹೇಳಿದ್ದಾರೆಯೇ? ಜನರು ಮಾತನಾಡುವುದಕ್ಕಿಂತ ಮಾಧ್ಯಮದಲ್ಲೇ ಜಾಸ್ತಿ ಚರ್ಚೆ ಆಗುತ್ತಿದೆ. ಆ ಪ್ರಶ್ನೆ ಕೇಳುವ ಅಗತ್ಯವೇನಿದೆ ಎಂದು ಗರಂ ಆದರು.