Select Your Language

Notifications

webdunia
webdunia
webdunia
webdunia

ನನ್ನ ಮಾತು ಕೇಳ್ತಿದ್ರೆ ಯಡಿಯೂರಪ್ಪ ಜೈಲಿಗೆ ಹೋಗ್ತಿರ್ಲಿಲ್ಲ: ಜಮೀರ್‌ ಅಹಮದ್ ಖಾನ್

Minister Zameer Ahmadh

Sampriya

ವಿಜಯನಗರ , ಶನಿವಾರ, 1 ನವೆಂಬರ್ 2025 (18:28 IST)
ವಿಜಯನಗರ: ಮೊದಲ ಬಾರಿಗೆ ಬಿಎಸ್‌ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಹಣಕಾಸು ನಿರ್ವಹಣೆ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಸಲಹೆ ಪಡೆಯಿರಿ ಎಂದು ಹೇಳಿದ್ದೆ, ಅವರು ನನ್ನ ಮಾತು ಕೇಳಿದ್ರೆ, ಜೈಲಿಗೆ ಹೋಗುತ್ತಿರಲಿಲ್ಲ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

ಇಲ್ಲಿ  ಇಂದು ನಡೆದ ಗ್ಯಾರಂಟಿ ಉತ್ಸವದಲ್ಲಿ ಮಾತನಾಡಿದ ಅವರು, ಹಣಕಾಸು ನಿರ್ವಹಣೆ ಎಂಬುದು ಸುಲಭದ ಮಾತಲ್ಲ, ಅದರಲೂ ಯಡಿಯೂರಪ್ಪ ಅವರು ಮೊದಲ ಬಾರಿಗೆ ಸಿಎಂ ಆದವರು. ಸಿದ್ದರಾಮಯ್ಯ ಆಗಲೇ 10 ಬಾರಿ ಬಜೆಟ್ ಮಂಡಿಸಿದ್ದರು. 

ರಾಜ್ಯದ ಹಿತದೃಷ್ಟಿಯಿಂದ ಅವರ ಸಲಹೆಯನ್ನು ಪಡೆಯುವಂತೆ ಹೇಳಿದ್ದೆ. ಆದರೆ ಬಿಎಸ್‌ವೈ ನನ್ನ ಮಾತನ್ನು ತಿರಸ್ಕರಿಸಿದ್ದು, ಇದರಿಂದಾಗಿಯೇ ಅವರಿಗೆ ಹಣಕಾಸು ನಿರ್ವಹಣೆ ಸಾಧ್ಯವಾಗಲಿಲ್ಲ, ಜೈಲಿಗೂ ಹೋಗುವ ಪರಿಸ್ಥಿತಿ ಬಂತು’ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಕೊಟ್ಟ ಬಳಿಕ ಯಶಸ್ವಿಯಾಗಿ ಅಭಿವೃದ್ಧಿ ಕೆಲಸಗಳನ್ನೂ ನಡೆಸುತ್ತ ಬಂದಿದೆ. ಪ್ರತಿ ತಿಂಗಳು ಗ್ಯಾರಂಟಿ ರೂಪದಲ್ಲಿ ಒಂದು ಕುಟುಂಬಕ್ಕೆ ₹6,500 ದುಡ್ಡಿನ ಉಳಿತಾಯವಾಗುತ್ತಿದೆ. ಸಿದ್ದರಾಮಯ್ಯ ಅವರ ಅನುಭವದಿಂದಲೇ ಇದೆಲ್ಲವೂ ಸಾಧ್ಯವಾಗಿದೆ ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

ಗ್ಯಾರಂಟಿಗಳಿಂದ ಅನುದಾನ ಸಿಕ್ತಿಲ್ಲ, ಶಾಸಕರು ಕಾಲಿಗೆ ಬೀಳ್ತಿದ್ದಾರೆ: ಜಮೀರ್ ಅಹ್ಮದ್