Select Your Language

Notifications

webdunia
webdunia
webdunia
webdunia

ಗ್ಯಾರಂಟಿಗಳಿಂದ ಅನುದಾನ ಸಿಕ್ತಿಲ್ಲ, ಶಾಸಕರು ಕಾಲಿಗೆ ಬೀಳ್ತಿದ್ದಾರೆ: ಜಮೀರ್ ಅಹ್ಮದ್

Zameer Ahmed Khan

Krishnaveni K

ಬೆಂಗಳೂರು , ಶನಿವಾರ, 1 ನವೆಂಬರ್ 2025 (18:23 IST)
ಬೆಂಗಳೂರು: ಗ್ಯಾರಂಟಿಗಳಿಂದಾಗಿ ಅನುದಾನ ಅಭಿವೃದ್ಧಿ ಕೆಲಸಗಳು ಕಷ್ಟವಾಗ್ತಿದೆ ಎಂದು ಸ್ವತಃ ಸಚಿವ ಜಮೀರ್ ಅಹ್ಮದ್ ಒಪ್ಪಿಕೊಂಡಿದ್ದಾರೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸಚಿವ ಜಮೀರ್ ಅಹ್ಮದ್ ಪ್ರತೀ ವರ್ಷ ಗ್ಯಾರಂಟಿಗಾಗಿಯೇ 55 ರಿಂದ 60 ಸಾವಿರ ಕೋಟಿ ರೂ ಬೇಕಾಗುತ್ತದೆ. ಹೀಗಾಗಿ ಅನುದಾನ ಸಿಗುವುದು ಕಷ್ಟವಾಗುತ್ತಿದೆ.

ಶಾಸಕರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅನುದಾನಕ್ಕಾಗಿ ಶಾಸಕರು ಕಾಲಿಗೆ ಬೀಳ್ತಿದ್ದಾರೆ. ನನ್ನ ಕ್ಷೇತ್ರದ ಸಮಸ್ಯೆ ಅಣ್ಣಾ ಅನುದಾನ ಕೊಡಿ ಎಂದು ಕಾಲಿಗೆ ಬೀಳ್ತಾರೆ ಎಂದ ಸಚಿವರು ಗ್ಯಾರಂಟಿಯಿಂದಾಗಿ ಅನುದಾನ ಬರ್ತಿಲ್ಲ ಎಂದಿದ್ದಾರೆ.

ಶಾಸಕರ ಬಗ್ಗೆ ಮಾತನಾಡುವ ಭರದಲ್ಲಿ ಸಚಿವ ಜಮೀರ್ ಅಹ್ಮದ್ ಗ್ಯಾರಂಟಿಯಿಂದ ಅನುದಾನ ಬರುತ್ತಿಲ್ಲ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಇದೀಗ ವಿಪಕ್ಷ ಬಿಜೆಪಿಗೆ ಟೀಕಾಸ್ತ್ರ ಸಿಕ್ಕಂತಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

85 ಮಂದಿಯಿಂದ ವಿಮಾನದಲ್ಲಿ ತಾಂತ್ರಿಕ ದೋಷ, ಆಮೇಲೆ ಏನಾಯಿತು ಗೊತ್ತಾ