ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನವೆಂಬರ್ ಕ್ರಾಂತಿ ಬಗ್ಗೆ ಭಾರೀ ಸದ್ದು ಆಗುತ್ತಿರುವ ಬೆನ್ನಲ್ಲೇ ಹೇಳಿಕೆ ಕೊಡುತ್ತಿರುವ ನಾಯಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ವಿಚಾರವಾಗಿ ಯಾರು ದಣಿವಾಗೋದು ಬೇಡ. ಿನ್ನೂ ನವೆಂಬರ್ ಕ್ರಾಂತಿ ವಿಚಾರವಾಗಿ ತಾವು ಹಾಗೂ ಸಿದ್ದರಾಮಯ್ಯ ಅವರು ಮಾತಾಡಿದರಷ್ಟೇ ಅಧಿಕೃತ. ಅದಕ್ಕಷ್ಟೇ ಬೆಲೆ. ನಾವಿಬ್ರು ಏನು ಮಾತಾಡಿಕೊಂಡಿದ್ದೇವೆಯೋ ಅದರಂತೆ ನಡೆದುಕೊಳ್ತೇವೆ ಅಂತ ಹೇಳಿದರು.
ಿದೀಗ ಡಿಕೆ ಶಿವಕುಮಾರ್ ಅವರ ಈ ಹೇಳಿಕೆ ಭಾರೀ ಕುತೂಹಲವನ್ನು ಮೂಡಿಸುತ್ತಿದೆ. ಹೇಳಿಕೆ ನೀಡುತ್ತಿರುವವರಿಗೆ ವಾರ್ನಿಂಗ್ ನೀಡಲು ಹೋಗಿ ಮಹತ್ವದ ಸುಳಿವು ಬಿಟ್ಕೊಟ್ರಾ ಅನ್ನೋ ಚರ್ಚೆ ಇದೀಗ ಮೂಡಿದೆ.
ಇನ್ನೂ ಕುತೂಹಲಕ್ಕೆ ಕಾರಣವಾಗುತ್ತಿರುವ ರಾಜ್ಯ ರಾಜಕಾರಣ ಬೆಳವಣಿಗೆ ನಡುವೆ , ನಾಯಕರ ದೆಹಲಿ ಭೇಟಿ ಪರ್ವ ಮುಂದುವರೆದಿದೆ. ಡಿಕೆಶಿ, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್ ದೆಹಲಿ ಭೇಟಿ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿಯವರೂ ದೆಹಲಿ ವಿಮಾನ ಏರುತ್ತಿರುವುದು ಭಾರೀ ಲೆಕ್ಕಚಾರವನ್ನು ಹುಟ್ಟುಹಾಕಿದೆ.