ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಭಾರೀ ಜೈಲು ಸೇರಿರುವ ನಟ ದರ್ಶನ್ ಅವರು ಇದೀಗ ತಿಂಗಳ ಬಳಿಕ ಕಾಣಿಸಿಕೊಂಡಿದ್ದಾರೆ. ಇಂದು ಕೋರ್ಟ್ ವಿಚಾರಣೆಯಿದ್ದ ಕಾರಣ ಪ್ರಕರಣದ ಎಲ್ಲ ಆರೋಪಿಗಳನ್ನು ಹಾಜರುಪಡಿಸಲಾಯಿತು.
ಎರಡನೇ ಭಾರೀ ಜೈಲು ಸೇರಿರುವ ದರ್ಶನ್, ಅಲ್ಲಿನ ಸಂಕಷ್ಟವನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಳಲನ್ನು ವಕೀಲರ ಮುಂದೆ ತೋಡಿಕೊಂಡಿದ್ದರು.
ಆರೋಗ್ಯಕ್ಕೂ ಪರಿಣಾಮ ಬೀರುತ್ತಿದೆ ಎಂದಿದ್ದರು. ಇನ್ನೂ ತಿಂಗಳ ಬಳಿಕ ದರ್ಶನ್ ಕಾಣಿಸಿಕೊಂಡಿದ್ದಾರೆ.
ಪೊಲೀಸ್ ಬಂದೋಬಸ್ತ್‌ನಲ್ಲಿ ಕೋರ್ಟ್‌ಗೆ ಬಂದ ದಾಸ, ಸಪ್ಪೆ ಮುಖದಲ್ಲೇ ವಾಹನದಲ್ಲಿ ಕೂತಿದ್ದರು. ಇನ್ನೂ ವಾಹನದಿಂದ ಇಳಿಯುತ್ತಿದ್ದ ಹಾಗೇ ಅಲ್ಲೇ ಇದ್ದ ಪೊಲೀಸ್ ಸಿಬ್ಬಂದಿ ಜತೆ ಮಾತನಾಡುತ್ತಾ, ಕೋರ್ಟ್‌ಗೆ ಪ್ರವೇಶಿಸಿದರು. ತೂಕ ಇಳಿಕೆಯಾಗಿದ್ದರಿಂದ ನಟ ದರ್ಶನ್ ಸೊರಗಿದ ಹಾಗೇ ಕಾಣಿಸುತ್ತದೆ.
ಇನ್ನೂ ಕೋರ್ಟ್ ವಿಚಾರಣೆ ಮುಗಿಸಿ ವಾಪಾಸ್ಸಾಗುತ್ತಿದ್ದಾಗ ಅಭಿಮಾನಿಗಳು ಡಿಬಾಸ್ ಡಿಬಾಸ್ ಎಂಧು ಕೂಗಿದಾಗ ನಗುತ್ತಲೇ ಕೈ ಬೀಸಿದ್ದಾರೆ.