ಹೈದರಾಬಾದ್: ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಾನ ಮನೋಜ್ಞವಾಗಿ ಅಭಿನಯಿಸಿದ ದಿ ಗರ್ಲ್‌ಫ್ರೆಂಡ್ ಸಿನಿಮಾ ಒಟಿಟಿಗೆ ಬರಲು ಸಜ್ಜಾಗಿದೆ. ಚಿತ್ರಮಂದಿರದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತ ಬೆನ್ನಲ್ಲೇ ಒಟಿಟಿಗೆ ಎಂಟ್ರಿಯಾಗಲಿದೆ.
ಈತನಕ ನಾಯಕ ಪ್ರಧಾನ ಸಿನಿಮಾಗಳಲ್ಲಿಯೇ ರಶ್ಮಿಕಾ ನಟಿಸಿದ್ದರು. ಮೊದಲ ಬಾರಿಗೆ ಮಹಿಳಾ ಪ್ರಧಾನ ಅದರಲ್ಲೂ ನಟನೆಗೆ ಹೆಚ್ಚು ಅವಕಾಶ ಇದ್ದ ಸಿನಿಮಾನಲ್ಲಿ ರಶ್ಮಿಕಾ ಬಣ್ಣ ಹಚ್ಚಿದ್ದರು. ದಿ ಗರ್ಲ್‌ಫ್ರೆಂಡ್ ಸಿನಿಮಾದಲ್ಲಿ ಅವರಿಗೆ ಅಂಥ ಅವಕಾಶ ದೊರಕಿತ್ತು.
ನವೆಂಬರ್ 7ರಂದು ದಿ ಗರ್ಲ್‌ಫ್ರೆಂಡ್ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾ ಈವರೆಗೆ ₹ 30 ಕೋಟಿ ಬಾಚಿಕೊಂಡಿದೆ. ಆ ಮೂಲಕ ಸಿನಿಮಾ ದೊಡ್ಡ ಹಿಟ್ ಆಗಿಲ್ಲದಿದ್ದರೂ ರಶ್ಮಿಕಾ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ದಿ ಗರ್ಲ್‌ಫ್ರೆಂಡ್ ಸಿನಿಮಾ ಡಿಸೆಂಬರ್ 11 ರಂದು ನೆಟ್‌ಫ್ಲಿಕ್ಸ್‌ಗೆ ಬರಲಿದೆ. ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಚರ್ಚೆ ಇದ್ದ ಕಾರಣ, ಸಿನಿಮಾದ ಡಿಜಿಟಲ್ ಹಕ್ಕುಗಳು ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿವೆ ಎನ್ನಲಾಗಿದೆ.