ಬೆಂಗಳೂರು: ಸ್ಯಾಂಡಲ್‌ವುಡ್‌ನ ಕಂಚಿನ ಕಂಠದ ನಟ ವಸಿಷ್ಠ ಸಿಂಹ ಮತ್ತು ಟಾಲಿವುಡ್‌ನ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ನಟನೆಯ ಒಡೆಲಾ 2 ಚಿತ್ರದ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ.
ಟಾಲಿವುಡ್‌ನಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರವನ್ನು ಏಪ್ರಿಲ್ 17ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.ಈ ಚಿತ್ರವನ್ನು ಅಶೋಕ ತೇಜ ಅವರು ನಿರ್ದೇಶನ ಮಾಡಿದ್ದಾರೆ.
ಬೋಲ್ಡ್ ಪಾತ್ರಗಳಿಗೆ ಜೀವ ತುಂಬುತ್ತಿದ್ದ ತಮನ್ನಾ ಅವರು ಇದೀಗ ವಿಭಿನ್ನ ಗೆಟಪ್‌ನಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾದ್ವಿ ಪಾತ್ರಕ್ಕೆ ಅವರು ಜೀವ ತುಂಬಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ಕನ್ನಡದ ನಟ ವಸಿಷ್ಠ ಸಿಂಹ ಕೂಡ ಒಡೆಲಾ 2 ಸಿನಿಮಾದಲ್ಲಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮನ್ನಾ ಮತ್ತು ಸಿಂಹ ಕಾಂಬಿನೇಷನ್ ಹೇಗಿರಲಿದೆ ಎಂದು ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
ಡಿ. ಮಧು ಮತ್ತು ಸಂಪತ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಯುವ, ನಾಗ ಮಹೇಶ್, ವಂಶಿ, ಸುರೇಂದರ್ ರೆಡ್ಡಿ, ಭೂಪಾಲ್, ಪೂಜಾ ರೆಡ್ಡಿ, ಹೆಬ್ಬಾ ಪಟೇಲ್ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ.