Select Your Language

Notifications

webdunia
webdunia
webdunia
webdunia

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

Ambareesh 7th Year Remembrance

Sampriya

ಬೆಂಗಳೂರು , ಸೋಮವಾರ, 24 ನವೆಂಬರ್ 2025 (17:29 IST)
Photo Credit X
ಕನ್ನಡದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಇಂದು 7ನೇ ವರ್ಷದ ಪುಣ್ಯಸ್ಮರಣೆ. ಇನ್ನೂ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಅವರ ಸಮಾಧಿಗೆ ಸುಮಲತಾ, ಅಭಿಷೇಕ್ ಅಂಬರೀಶ್ ಅವುರ ಅಭಿಮಾನಿಗಳ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. 

ಇನ್ನೂ ಅಂಬರೀಶ್ ಅವರ ಪುಣ್ಯಸ್ಮರಣೆ ಹಿನ್ನೆಲೆ ಸುಮಲತಾ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ. 

ಇಂದು ನಿಮ್ಮ ಅಗಲಿಕೆಗೆ ಏಳು ವರ್ಷಗಳು. ನೀವು ಇಲ್ಲ ಎನ್ನುವ ಕೊರಗು ಒಂದು ಕಡೆ ಕಾಡುತ್ತಿದೆ. ಎಲ್ಲೋ ಒಂದುಕಡೆ ನಮ್ಮೊಂದಿಗೇ ಇದ್ದೀರಿ ಎನ್ನುವ ನಂಬಿಕೆಯೊಂದಿಗೆ ನಾವಿದ್ದೇವೆ.

ನೀವು ತೋರಿದ ಪ್ರೀತಿ, ಹೃದಯವಂತಿಕೆ, ಔದಾರ್ಯ... ಇವೆಲ್ಲವೂ ನನ್ನಲ್ಲಿ, ಅಭಿಮಾನಿಗಳಲ್ಲಿ, ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಇನ್ನೂ ಜೀವಂತವಾಗಿವೆ. . ನೀವು ಒಬ್ಬ ನಟನಾಗಿ ಮಾತ್ರವಲ್ಲ, ಒಬ್ಬ ಮನುಷ್ಯನಾಗಿ ಗೆದ್ದವರು. ಅದಕ್ಕೇ ನಿಮ್ಮನ್ನು ಈ ನಾಡಿನ ಜನತೆ ಕರ್ಣ ಎಂದು ಕರೆದಿದ್ದಾರೆ.

ಅಂಬಿ... ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ...

ನೀವು ಇಲ್ಲದ ಈ ಏಳು ವರ್ಷಗಳಲ್ಲಿ ನಾನೊಬ್ಬಳೇ ಅಲ್ಲ, ಪ್ರತಿ ಅಭಿಮಾನಿಯ ಮನದಲ್ಲಿಯೂ ನಿಮ್ಮ ನೆನಪನ್ನು ಜೀವಂತವಾಗಿ ಇಟ್ಟಿದ್ದಾರೆ. ನಿಮ್ಮನ್ನು ಪ್ರೀತಿಸಿದ ಜನರ ಹೃದಯದಲ್ಲಿ ನೀವು ಎಂದೆಂದಿಗೂ ಜೀವಂತವಾಗಿದ್ದೀರಿ.

ಅಂಬಿ... ನೀವು ಅಮರ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ