Select Your Language

Notifications

webdunia
webdunia
webdunia
webdunia

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

Priyanka Chopra

Sampriya

ನವದೆಹಲಿ , ಮಂಗಳವಾರ, 2 ಡಿಸೆಂಬರ್ 2025 (19:36 IST)
Photo Credit X
ನವದೆಹಲಿ: ಡಿಸೆಂಬರ್ 1 ರಂದು ಜೋಧ್‌ಪುರದ ಉಮೈದ್ ಭವನ್ ಅರಮನೆಯಲ್ಲಿ ಗಾಯಕ ನಿಕ್ ಜೋನಾಸ್ ಅವರನ್ನು ಕೈಹಿಡಿದ ಪ್ರಿಯಾಂಕಾ ಚೋಪ್ರಾ ದಾಂಪತ್ಯ ಜೀವನಕ್ಕೆ 7 ವರ್ಷ. 

ವೈವಾಹಿಕ ವರ್ಷದ ಹಿನ್ನೆಲೆ ನಟಿ ಪ್ರಿಯಾಂಕಾ ಅವರ ಫೋಟೋವನ್ನು ನಿಕ್‌  ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  "ನನ್ನ ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷಗಳು" ಎಂದು ಬರೆದ ಸಿಹಿ ಟಿಪ್ಪಣಿಯನ್ನು ಬರೆದಿದ್ದಾರೆ. ಇದೀಗ ಪ್ರಿಯಾಂಕಾ ಚೋಪ್ರಾ ಕೂಡ ಅಷ್ಟೇ ಸಿಹಿಯಾದ ಪ್ರತಿಕ್ರಿಯೆ ನೀಡಿದ್ದಾರೆ. 

ನಿಕ್ ಜೋನಾಸ್ ಅವರ ಕಥೆಯನ್ನು ಮರು-ಹಂಚಿಕೊಂಡ ಪ್ರಿಯಾಂಕಾ, "ನೀವು ಕನಸುಗಳನ್ನು ಮಾಡಿದ್ದೀರಿ" ಎಂದು ಬರೆದಿದ್ದಾರೆ.

ದಂಪತಿಗಳು ತಮ್ಮ ಮೊದಲ ಮಗು ಮಾಲ್ಟಿ ಮೇರಿ ಚೋಪ್ರಾ ಜೋನಾಸ್ ಅವರನ್ನು ಜನವರಿ 2022 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು