Select Your Language

Notifications

webdunia
webdunia
webdunia
webdunia

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

Dulquer Salmaan

Sampriya

ಬೆಂಗಳೂರು , ಮಂಗಳವಾರ, 2 ಡಿಸೆಂಬರ್ 2025 (17:43 IST)
Photo Credit X
ಬೆಂಗಳೂರು: ದುಲ್ಕರ್ ಸಲ್ಮಾನ್ ಮಲಯಾಳಂ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಅನೇಕ ಹಿಟ್‌ಗಳೊಂದಿಗೆ ದಕ್ಷಿಣದ ಬಹುಬೇಡಿಕೆಯ ದೊಡ್ಡ ಸ್ಟಾರ್ ನಟನಾಗಿ ಹೊರಹೊಮ್ಮಿದ್ದಾರೆ. ದಕ್ಷಿಣ ಭಾರತದಲ್ಲಿ ಸ್ಟಾರ್ ನಟನಾಗಿದ್ದರೂ, ಹಿಂದಿ ಚಲನಚಿತ್ರೋದ್ಯಮದಲ್ಲಿ ಅನುಭವಿಸಿದ ನಿರ್ಲಕ್ಷದ ಬಗ್ಗೆ ಹೇಳಿದ್ದಾರೆ.  

ಹಾಲಿವುಡ್ ರಿಪೋರ್ಟರ್ ಇಂಡಿಯಾದ ನಿರ್ಮಾಪಕರ ರೌಂಡ್‌ಟೇಬಲ್‌ನಲ್ಲಿ ಮಾತನಾಡಿದ ದುಲ್ಕರ್, ಬಾಲಿವುಡ್‌ನಲ್ಲಿ ಕೆಲಸ ಮಾಡುವಾಗ ನಾನು ಸೆಟ್‌ಗಳಲ್ಲಿ ತಳ್ಳಲ್ಪಡುತ್ತೇನೆ ಮತ್ತು ಕಡೆಗಣನೆ ಒಳಗಾಗಿದ್ದೆ ಎನ್ನುತ್ತಾರೆ. 

ದುಲ್ಕರ್ ಸಲ್ಮಾನ್ ಹೇಳಿರುವಂತೆ ಬಾಲಿವುಡ್​​ನಲ್ಲಿ ತಾವು ಸೂಪರ್ ಸ್ಟಾರ್ ಎಂದು ತೋರಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ನಿಮ್ಮನ್ನು ಯಾರೂ ಕೇರ್ ಸಹ ಮಾಡುವುದಿಲ್ಲ‌ ಎಂದಿದ್ದಾರೆ. ಮಾತ್ರವಲ್ಲದೇ ತಮ್ಮದೇ ಉದಾಹರಣೆಯನ್ನು ನೀಡಿದ್ದಾರೆ.

ಸೆಟ್‌ಗಳಲ್ಲಿ ಗಮನ ಸೆಳೆಯಲು ತಾನೊಬ್ಬ ದೊಡ್ಡ ಸ್ಟಾರ್ ಎಂಬ ಭ್ರಮೆಯನ್ನು ಹುಟ್ಟುಹಾಕಬೇಕು. ಇಲ್ಲದಿದ್ದರೆ ನಿಮಗೆ ಯಾರೂ ಗೌರವವನ್ನು ಕೊಡುವುದಿಲ್ಲ.   ನೀವು ಇಬ್ಬರು ಸಹಾಯಕರೊಟ್ಟಿಗೆ ಬಂದರೆ ನಿಮ್ಮನ್ನು ಸೆಟ್​​ನಲ್ಲಿ ಮೂಲೆಗುಂಪು ಮಾಡಲಾಗುತ್ತದೆ. ಕೂರಲೂ ಕುರ್ಚಿ ಸಹ ನೀಡುವುದಿಲ್ಲ. 

ನನಗೆ ಒಂದು ಸಿನಿಮಾದ ಶೂಟಿಂಗ್ ಮಾಡುವಾಗ ಮಾನಿಟರ್ ಹಿಂದೆ ಜಾಗವೇ ಕೊಡುತ್ತಿರಲಿಲ್ಲ. ಅದೇ ನೀವು ಹತ್ತಾರು ಸಹಾಯಕರನ್ನು ಕರೆದುಕೊಂಡು, ಭಾರಿ ದೊಡ್ಡ ಗಾಡಿಯಲ್ಲಿ ಸೆಟ್​​ಗೆ ಬಂದಿರೆದಂರೆ ನಿಮ್ಮನ್ನು ಹೀರೋ ರೀತಿ ನಡೆಸಿಕೊಳ್ಳಲಾಗುತ್ತದೆ. ಬಾಲಿವುಡ್​​ನಲ್ಲಿ ಸರಳವಾಗಿದ್ದರೆ ಗೌರವ ಸಿಗುವುದಿಲ್ಲ. ಬಲವಂತವಾಗಿ ಸ್ಟಾರ್​ ಗಿರಿ ತೋರಿಸಬೇಕಾಗುತ್ತದೆ ಎಂದಿದ್ದಾರೆ 


Share this Story:

Follow Webdunia kannada

ಮುಂದಿನ ಸುದ್ದಿ

ಮೊನ್ನೆ ದೈವದ ಅನುಕರಣೆ, ಇಂದು ಜನರಲ್ಲಿ ಕ್ಷಮೆಯಾಚಿಸಿದ ರಣವೀರ್ ಸಿಂಗ್