ದುಬೈ: ಸಾನಿಯಾ ಮಿರ್ಜಾ ಬಳಿಕ ಈಗ ಮಾಜಿ ಪತಿ, ಪಾಕಿಸ್ತಾನ ಕ್ರಿಕೆಟಿಗ ಶೊಯೇಬ್ ಮಲಿಕ್ ಮೂರನೇ ಪತ್ನಿ ಸನಾ ಜಾವೇದ್ ಗೂ ಸೋಡಾ ಚೀಟಿ ಕೊಡಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ನೆಟ್ಟಿಗರು ಏನಪ್ಪಾ ಈತನ ಲೀಲೆ ಎನ್ನುತ್ತಿದ್ದಾರೆ.
ಸಾನಿಯಾ ಮಿರ್ಜಾಗೆ ಮುನ್ನ ಶೊಯೇಬ್ ಮಲಿಕ್ ಆಯೆಷಾ ಎಂಬಾಕೆಯನ್ನು ಮದುವೆಯಾಗಿದ್ದರು. ಆಕೆಗೆ ತಲಾಖ್ ನೀಡಿದ ಬಳಿಕ ಸಾನಿಯಾರನ್ನು ಮದುವೆಯಾಗಿದ್ದರು. 14 ವರ್ಷ ದಾಂಪತ್ಯದ ಬಳಿಕ ಸಾನಿಯಾರಿಂದ ಶೊಯೇಬ್ ದೂರವಾಗಿದ್ದರು.
ಕಳೆದ ವರ್ಷವಷ್ಟೇ ಶೊಯೇಬ್ ಪಾಕಿಸ್ತಾನದ ಮಾಡೆಲ್ ಸನಾ ಜೊತೆ ಮೂರನೇ ಬಾರಿಗೆ ಮದುವೆಯಾಗಿದ್ದರು. ಆದರೆ ಈಗ ಒಂದೇ ವರ್ಷಕ್ಕೆ ಇಬ್ಬರ ನಡುವೆ ಬಿರುಕು ಮೂಡಿದೆ ಎನ್ನಲಾಗಿದ್ದು, ಸದ್ಯದಲ್ಲೇ ವಿಚ್ಛೇದನದ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಸನಾ ಜೊತೆಗಿನ ದಾಂಪತ್ಯ ಒಂದು ವರ್ಷವೂ ನಿಲ್ಲಲಿಲ್ಲ. ಸಾನಿಯಾ ಜೊತೆಗೆ ಮದುವೆಯಲ್ಲಿ ಶೊಯೇಬ್ ಗೆ ಓರ್ವ ಪುತ್ರನಿದ್ದಾನೆ. ಮೂರನೇ ಮದುವೆಯೂ ಈಗ ಮುರಿದು ಬೀಳುವ ಹಂತಕ್ಕೆ ಬಂದಿದೆ.