Select Your Language

Notifications

webdunia
webdunia
webdunia
webdunia

INDW vs PAKW: ಭಾರತ ಮಹಿಳಾ ಕ್ರಿಕೆಟಿಗರೂ ಪಾಕಿಸ್ತಾನಿಯರ ಕೈ ಕುಲುಕಲ್ಲ

Indians Women Cricket Team

Krishnaveni K

ಕೊಲಂಬೋ , ಶನಿವಾರ, 4 ಅಕ್ಟೋಬರ್ 2025 (12:22 IST)
ಕೊಲಂಬೋ: ಭಾರತ ಮತ್ತು ಪಾಕಿಸ್ತಾನ ಮಹಿಳೆಯರ ನಡುವೆ ವನಿತಾ ವಿಶ್ವಕಪ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲೂ ಮಹಿಳಾ ಕ್ರಿಕೆಟಿಗರು ಪಾಕಿಸ್ತಾನ ಕ್ರಿಕೆಟಿಗರ ಕೈ ಕುಲುಕಲ್ಲ.

ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆ ಭಾರತೀಯ ಕ್ರಿಕೆಟಿಗರು ಎದುರಾಳಿಗಳ ಕೈ ಕುಲುಕದೇ ಇದ್ದಿದ್ದು ಭಾರೀ ವಿವಾದಕ್ಕೀಡಾಗಿತ್ತು. ಪಾಕಿಸ್ತಾನ ಕ್ರಿಕೆಟಿಗರು ಈ ವಿಚಾರದಲ್ಲಿ ಹೈಡ್ರಾಮಾವನ್ನೇ ಸೃಷ್ಟಿಸಿದ್ದರು.

ಇದೀಗ ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲೂ ಭಾರತೀಯ ಆಟಗಾರರು ಎದುರಾಳಿಗಳ ಕೈ ಕುಲುವುದಿಲ್ಲ ಎಂದು ಈಗಾಗಲೇ ಬಿಸಿಸಿಐ ಸಂದೇಶ ರವಾನಿಸಿದೆ.

ಟಾಸ್ ವೇಳೆ ಅಥವಾ ಪಂದ್ಯದ ನಂತರ ಭಾರತೀಯ ಆಟಗಾರರು ಕೈ ಕಲುಕುವುದಿಲ್ಲ ಎಂದು ಮೊದಲೇ ಬಿಸಿಸಿಐ ಸ್ಪಷ್ಟ ಸಂದೇಶ ನೀಡಿದೆ. ಹೀಗಾಗಿ ಪಾಕ್ ಕ್ರಿಕೆಟ್ ಮಂಡಳಿ ಈ ವಿಚಾರದಲ್ಲಿ ಯಾವುದೇ ಡ್ರಾಮಾ ಮಾಡುವಂತಿಲ್ಲ. ಇಂದಿನ ಪಂದ್ಯದಲ್ಲಿ ಯಾವುದೇ ಭಾವನೆ ತೋರ್ಪಡಿಸದೇ ಕೇವಲ ಔಪಚಾರಿಕವಾಗಿ ಭಾರತೀಯ ಕ್ರಿಕೆಟ್ ತಂಡ ಆಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

RCB ಕಪ್ ಗೆದ್ದ ರಜತ್ ಪಾಟೀದಾರ್‌ಗೆ ಒಲಿದ ಅದೃಷ್ಟ