ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸಿಎಂ ಕುರ್ಚಿ ಫೈಟ್ ಇಂದು ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪುವ ಸಾಧ್ಯತೆಯಿದೆ. ಇದಕ್ಕಾಗಿ ಈ ಒಂದು ಮೀಟಿಂಗ್ ಮೇಲೆ ಎಲ್ಲರ ಕಣ್ಣಿದೆ.
ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ರಾಜ್ಯ ನಾಯಕರೊಂದಿಗೆ ಸರಣಿ ಮಾತುಕತೆ ನಡೆಸಿ ವರದಿಯೊಂದಿಗೆ ದೆಹಲಿಗೆ ತೆರಳಿದ್ದಾರೆ. ತಮ್ಮ ಕೈಯಲ್ಲಿ ಸಮಸ್ಯೆ ಪರಿಹಾರ ಸಾಧ್ಯವಾಗುತ್ತಿಲ್ಲ ಎಂದು ಕೈ ಚೆಲ್ಲಿರುವ ಖರ್ಗೆ ಇಂದು ದೆಹಲಿಯಲ್ಲಿ ಅವರು ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸುವ ಸಾಧ್ಯತೆಯಿದೆ.
ಈ ಮಾತುಕತೆ ವೇಳೆ ರಾಹುಲ್ ಗಾಂಧಿ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವುದರ ಮೇಲೆ ರಾಜ್ಯದ ಕುರ್ಚಿ ಕದನದ ಹಣೆಬರಹ ತೀರ್ಮಾನವಾಗಲಿದೆ. ರಾಹುಲ್ ಮಾತಿಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬೆಲೆ ಕೊಡುತ್ತಾರಾ ನೋಡಬೇಕಿದೆ.
ಅಷ್ಟು ಬೇಗ ರಾಹುಲ್ ಒತ್ತಡಗಳಿಗೆ ಮಣಿಯುವ ವ್ಯಕ್ತಿಯಲ್ಲ. ಹೀಗಾಗಿ ಡಿಕೆ ಶಿವಕುಮಾರ್ ಬೆಂಬಲಿಗರು ಎಷ್ಟೇ ಒತ್ತಡ ಹಾಕಿದರೂ ಅಂತಿಮ ತೀರ್ಮಾನ ರಾಹುಲ್ ರದ್ದೇ ಆಗಿರುತ್ತದೆ. ಹೀಗಾಗಿ ಇಂದಿನ ಖರ್ಗೆ-ರಾಹುಲ್ ಭೇಟಿಯಲ್ಲಿ ಏನಾಗಲಿದೆ ಎಂಬುದು ಸದ್ಯದ ಕುತೂಹಲವಾಗಿದೆ.